ಶಿವಮೊಗ್ಗದಲ್ಲೇ ಹುಟ್ಟಿ ಬೆಳದಿದ್ದರೂ ಇಷ್ಟು ವರ್ಷ ಬೇಕಾಯ್ತು ಹೋಗೋದಕ್ಕೆ.
ಶಿವಮೊಗ್ಗದಿಂದ ಹೆಚ್ಚು ಕಡಮೆ 15km ದೂರದಲ್ಲಿ, ಮಂಗಳೂರು ದಾರೀಲಿ, ಗಾಜನೂರು ಆದಮೇಲೆ ಇದೆ ಈ elephant camp.  ಆನೆಗಳು ಬರುವಾಗ ಗಂಟೆ 8:30  ಆಗತ್ತೆ. ಒಂದಾದಮೇಲೆ ಒಂದು ಆನೆಗಳು ಮಾವುತನ ಜೊತೆಗೆ ಬಂದು, ನೀರಿನಲ್ಲಿ ಹೋಗಿ ಬಿದ್ದುಕೊಳ್ಳೋದು ನೋಡೋಕೆ ಮಜಾ :) ಪುಟಾಣಿಗಳು ಇದ್ರೆ, ಇನ್ನು ಮಜಾ. ಗೂಡು ಗೂಡು ಓಡುತ್ತಾ, ನೀರಲ್ಲಿ ಪಚಕ್ ಪಚಕ್ ಮಾಡ್ತಾ, ಮಾವುತನ ಮಾತು ಕೇಳದೆ , ಚೇಷ್ಟೆ ಮಾಡತ್ತೆ :) ತುಂಗೆಯಲ್ಲಿ ಆರಾಮಾಗಿ ಬಂದು ಮಲಗಿರೋ ಆನೆಗಳನ್ನ ಬ್ರಶ್ ಹಾಕಿ ಚೆನ್ನಾಗಿ ತಿಕ್ಕಿ ತಿಕ್ಕಿ ಸ್ನಾನ ಮಾಡಸ್ತಾನೆ ಮಾವುತ. (ಆನೆ ಸ್ನಾನ ನೋಡೋದಕ್ಕೆ ಹೋಗಿದ್ಯ? ಅಂತ ಕೇಳಬೇಡಿ :P )ಬ್ರಶ್ ನೋದ್ದಿದರೆ ಬೇಜಾರಾಗತ್ತೆ, ಸ್ವಲ್ಪ soft  ಆಗಿ ಮಾಡಬಾರದ ಅಂತ. ಹತ್ರ ಹೋಗಿ, ಆನೆ ಚರ್ಮ ಮುಟ್ಟಿನೋಡಿದಮೇಲೆ ಸಮಾಧಾನ ಆಗತ್ತೆ. ಇದೆಲ್ಲ ಯಾವ ಮೂಲೆಗೂ ತಾಗಲ್ಲ ಅಂತ. ಬೇಕಾದ್ರೆ ನಾವುನೂ ಆನೆ ಮೈ ತೊಳಿಬಹುದು, ತಿಂಡಿ ತಿಂದು ಬಂದಿರಬೇಕು ಅಷ್ಟೇ ;) ದಿನಾ ತೊಳಿಲಿಲ್ಲ ಅಂದ್ರೆ, ಮಣ್ಣು ಸೇರಿ parasites ಬೆಳೆಯುತ್ತೆ ಅಂತೆ.ಹಾಗಾಗಿ ಆನೆಗಳಿಗೆ ಪ್ರತಿ ದಿನ ಸ್ನಾನ ಮಾಡ್ಸ್ತಾರೆ :P ದೋಣಿ ವಿಹಾರ ಕೂಡ ಇದೆ ಇಲ್ಲಿ. ಮೋಟಾರು ದೋಣಿಯಲ್ಲಿ ಒಂದ್ ಸುತ್ತು ಹೋಗಬಹುದು. ಆನೆಗಳು clean clean  ಆದಮೇಲೆ ಕೆಲವಕ್ಕೆ ಸವಾರಿ ಕಟ್ಟುತ್ತಾರೆ. ಜಂಬೂ ಸಾವರಿನೂ ಮಾಡಬಹುದು. ಒಂದ್ ರಾಶಿ ಆನೆಗಳನ್ನ ಒಟ್ಟಿಗೆನೋಡೋದಕ್ಕೆ ಖುಷಿ ಆಗತ್ತೆ. weekend ಕಿಂತ weekday ಹೋಗಿ, ಜನ ಕಡಿಮೆ ಇರ್ತಾರೆ.
Boating :Rs.20
Elephant Ride :Rs.75
Entrance : Rs.30
Still cam: no entrance fee
Handy cam:Rs.30
Timings : 8-11 everyday
pics : http://picasaweb.google.co.in/greeshmakb/Sakrebailu#
 
0 comments:
Post a Comment