Sidewalk Cafe , Ooty

ಹೊಸ ವರ್ಷದಲ್ಲಿ ಹೊಸದಾಗಿ ಮಾಡಿದ್ದು ಅಂದ್ರೆ ಒಂದ್ ದೊಡ್ಡ ಪಟ್ಟಿ. ಈ ವರ್ಷದಲ್ಲಿ ಬೆಂಗಳೂರಿನ ಒಳಗೆ, ಹೊರಗೆ ಯಾವ ಯಾವ ಜಾಗಕ್ಕೆ ಹೋಗಬೇಕು? ಎಲ್ಲೆಲ್ಲಿ ತಿನ್ನಬೇಕು ಅನ್ನೋ ಪಟ್ಟಿ.
ಬೆಂಗಳೂರು ಸುತ್ತಕ್ಕೆ ಜೊತೆ ಬೇಕು ಅನ್ನೋ ತಲೆ ನೋವು ಇಲ್ಲ. ನಾವೇ ಇಬ್ಬರು (room mate) ತಿರುಗುತ್ತೀವಿ. ಪಟ್ಟಿಲಿ ಇರೋದೆಲ್ಲಾ cover ಮಾಡಬಹುದು. ಆದ್ರೆ ಹೊರಗ್ ಹೋಗೋದು ಸ್ವಲ್ಪ ಕಷ್ಟ. ಜೊತೆಗೆ ಜನ ಇಲ್ಲ ಅಂದ್ರೆ ಮಜನೂ ಬರಲ್ಲ.ಅಂತೂ ಸಂಕ್ರಾಂತಿ weekend ಜನರನ್ನ ಒಟ್ಟು ಮಾಡಿ ಹೊರಡೋದು ಊಟಿ ಗೆ ಅಂತ ಆಯ್ತು!

೨0 ದಿನದ ಹಿಂದೆ ಅಷ್ಟೇ ಕೆಮ್ಮಣ್ಣುಗುಂಡಿ ಕುದ್ರೆಮುಖ ಹೋಗಿದ್ದರುನೂ ಮನೆ ಇಂದ permission ಈ ಸಲಕ್ಕೆ ಕಷ್ಟ ಆಗಲಿಲ್ಲ.ಆದ್ರೆ ಬೆಳಿಗ್ಗೆ ಹೋಗಿ, ಸಂಜೆ ವಾಪಾಸು ಅನ್ನೋ condition ಮೇಲೆ! ಮೈಸೂರಲ್ಲಿ ಉಳುದು ಅಲ್ಲಿಂದ ಹೋಗೋದು ಅಂತ ಆಯ್ತು.ಆದ್ರೂನು ಊಟಿನ ಒಂದೇ ದಿನದಲ್ಲಿ ಹೇಗೆ ನೋಡಿ ಮುಗಿಸೋದು?Something is better than nothing ಅಲ್ವ?
so research ಶುರು ಮಾಡಿದ್ವಿ. ಪ್ರತಿ ದಿನ office ಲಿ free ಇರೋವಾಗ ಇದೇ ಕೆಲಸ, ಮನೆಗೆ ಬಂದೂ ಇದೇ ಕೆಲಸ.ಊಟಿ ಬಗ್ಗೆ research.ಇರೋದರಲ್ಲಿ ಯಾವ combination ಚೆನ್ನಾಗಿದೆ, ನಮ್ಮ ಹತ್ರ ಇರೋ ಆದಷ್ಟು ಸಮಯದಲ್ಲಿ ಯಾವದು ಸರಿ ಹೋಗತ್ತೆ ಅಂತ.ನಕ್ಷೆ ಹಿಡಿದುಕೊಂಡು ಊಟಿ ರಸ್ತೆಗಳ ಪರಿಚಯ ಬೆಂಗಳೂರಿನಲ್ಲೇ ಆಗಿಹೋಗಿತ್ತು! ಎರಡೇ ಜಾಗಕ್ಕೆ ಹೋದರುನೂ, ಅದನ್ನ ಚೆನ್ನಾಗಿ ನೋಡಿ, ಆನಂದಿಸಿ ಬರಬೇಕು ಅನ್ನೊಂದು ನಮ್ಮ motto.

ಎಲ್ಲಿಗೆ ಹೊದ್ರುನೂ ಮೊದಲಿಗೆ ತಿನ್ನೋದಕ್ಕ್ ಏನು ಚೆನಾಗಿ ಸಿಗತ್ತೆ ಅಂತ ನೋಡೋ ಅಭ್ಯಾಸ. ಊಟಿಲಿ Sidewalk cafe, ದೊಡ್ಡ ಬೆಟ್ಟ, ಪೈಕಾರ falls, botanical garden ಇಷ್ಟಕ್ಕೆ ಹೋಗೋದು ಅಂತ ಆಯ್ತು.ಕೊನೆಯ 3 ಜಾಗದ ಬಗ್ಗೆ ಹೆಚ್ಚಾಗಿ ಎಲ್ಲಾರಿಗೂ ಗೊತ್ತೇ ಇರುತ್ತೆ ಸೂಪರ್ ಇದೆ ಅಂತ!sidewalk cafe ನು ಅಷ್ಟೆ ..ಸಕತ್! ಎಲ್ಲರಿಗೂ ಈ ವಿಷಯ ಗೊತ್ತಿಲ್ಲ ಅಂತ ಅಂದುಕೊಂಡು ಬರೀತಾ ಇದೀನಿ ;)


level ಜಾಗ, ಬೋಳಿಸುತ್ತಾರೆ ಅಂತ ಗೊತ್ತಾಯ್ತು. ಆದ್ರೂನು ಹೋಗೋದೇ ಅಂತ ನುಗ್ಗಿದ್ವಿ.Speciality ಏನ್ ಗೊತ್ತಾ? ಮುಂಚೆ ಅಜ್ಜಿ ಮನೇಲಿ, ಕಟ್ಟಿಗೆ ಒಲೆಲಿ ಅಡಿಗೆ ಮಾಡ್ತಾ ಇದ್ರಲ...ಸ್ವಲ್ಪ ಹಂಗೇನೆ ಇಲ್ಲಿ pizza ಮಾಡೋದು! ಕಟ್ಟಿಗೆ ಓಲೆ oven ಲಿ!ಜಾಗ ಚಂದ ಇದೆ. ಖುಷಿ ಆಗತ್ತೆ. ಹಳೇ ಕಾಲದ posh look.ಯಾವುದೋ ಜಮಾನದ coca cola advertisement poster ಇದೆ.


"wow! " ಅನ್ಸತ್ತೆ:) pizza ಮಾಡೋದನ್ನ ಕೂತುಕೊಂಡು ನೋಡಬಹುದು.ಎದುರಿಗೇ ಮಾಡ್ತಾರೆ ಬಿಸಿ ಬಿಸಿ pizza.ನಮ್ಮ ಥರ over excitement ತೋರಿಸಿದರೆ ಅಡುಗೆ ಭಟ್ತನ ಟೋಪಿ ಕೊಡ್ತಾರೆ,ಹಾಕೊಂಡು ನಾವೇ pizza ನ oven ಲಿ ಇಟ್ಟು, ಸಾಕ್ಷಿಗೆ ಫೋಟೋ ತೆಗೆಸಿಕೊಳ್ಳಬಹುದು:) pizza base ತೆಳು ಇರತ್ತೆ. so ಹೆಚ್ಚಿಗೆ ಹಿಟ್ಟ್ ಹಿಟ್ಟ್ ಅನಿಸೋಲ್ಲ. cheese ಹಾಕೋವಾಗ ಬೆಂಗಳೂರಿನಲ್ಲಿ ಇರೋ ಕಂಜೂಸಿ ತನ ಇಲ್ಲ. ಥರ ಥರಾಂತರದ sauce ಕೊಡ್ತಾರೆ ಜೊತೇಲಿ. ಚಪ್ಪರಿಸಿಕೊಂಡು ತಿನ್ನಬಹುದು! sizzlersu ತಿಂದ್ವಿ. Pasta ಮಾಡಿದ್ರು. ಏನ್ ಚೆನಾಗಿ ಮಾಡ್ತಾರೆ creaaaamy ಇರತ್ತೆ. ಎಲ್ಲಿಂದನೋ ಒಳ್ಳೆ ಭಟ್ಟನನ್ನ ಹಿಡಿದುಕೊಂಡ್ ಬಂದಿದಾರೆ! ಹೋಗಿದಕ್ಕೂ ಸಾರ್ಥಕ! bill ಬೆಂಗಳೂರಿಗಿಂತ ಸ್ವಲ್ಪ ಕಡಿಮೆ ಅಷ್ಟೇ. ಆದರು experience ಅಂತು mast ಇತ್ತು. pizza ಇಷ್ಟ ಇಲ್ಲ ಅಂದ್ರೆ ಮಾತ್ರ miss ಮಾಡಬಹುದು ಈ ಜಾಗನ. ಇಲ್ಲ ಅಂದ್ರೆ ಊಟಿಗೆ ಹೋದಾಗ ತಪ್ಪಿಸಬಾರದು!

2 comments:

ತಿರುಗಿing...ವಾವ್...and ತಿನ್ನಿing...ಸೂಪರ್ ಗ್ರೀಶ್ಮ...ನಿಮ್ಮ ಈ ಶೀರ್ಷಿಕೆನೋಡಿಯೇ ಓಡಿ ಬಂದೆ...ಇದು ಮನಸ್ಸಿಗೆ ಕಚಗುಳಿಯಿಡುವ Title...
ನಿಮ್ಮ ಈ ಊಟಿ ಪ್ರವಾಸದ ಮೆಲುಕನ್ನೂ ಇದೇ e-style ನಲ್ಲಿ ಬರ್ದಿದ್ರೆ ಚನ್ನಾಗಿರ್ತಿತ್ತು...ಹಹಹ..ಆದ್ರೂ throoughly enjoyed ನಿಮ್ಮ ಬರವಣಿಗೆಯನ್ನ...ಮುಂದುವರಿಯಲಿ..

 

@ಜಲಾನಯನ
ಶೀರ್ಷಿಕೆ ಚೆನಾಗಿದೆ ಅಂತ ಕೇಳಿ ಖುಷಿ ಆಯ್ತು :)
ಇನ್ನೂ witty ಆಗಿ ಬರಿಯೋದಕ್ಕೆ ಪ್ರಯತ್ನ ಮಾಡ್ತೀನಿ!

 

Post a Comment