Golmaal parantha & Natural Ice cream

Weekendu ಅಂತ ನಿಧಾನಕೆ ಹತ್ತು ವರೆಗೆ ಕಣ್ಣು ಬಿಟ್ಟೆ. room mate ಇರಲಿಲ್ಲ. ಏನು ಮಾಡೋದು ಅಂತ ತೋಚಲಿಲ್ಲ. JP ನಗರದಲ್ಲಿರೋ friend ಗೆ phone ಹೊಡ್ದೆ. ಮಧ್ಯಾಹ್ನ ಊಟಕ್ಕೆ ಎಲ್ಲಿಗಾದ್ರೂ ಹೋಗಣ ಇಲ್ಲಿಗೆ ಬಂದು ಬಿಡು ಅಂದ್ಲು. ಹೇಗೂ ಕೆಲಸ ಇರ್ಲಿಲ್ಲ. ಊಟಕ್ಕೆ ಹೊರಗೆ ಹೋಗೋದು ಅಂದ್ಲು. ಜೈ ಅಂದೆ. ಜಯನಗರ 4th block ಲಿ "ಗೋಲ್ ಮಾಲ್ ಪರಾಟ" ದು ಹೊಸಾ outlet ಶುರು ಆಗಿದೆ ಅಂತ ಓದಿದ್ದೆ. address, phone number ಎಲ್ಲಾ note ಮಾಡಿಕೊಂಡು ಹೊರಟೆ! ಜಾಗ ಹುಡುಕೋದು ಏನು ಕಷ್ಟ ಇಲ್ಲ. 28 A Cross.ಈ outlet ಸಂಪೂರ್ಣ ಸಸ್ಯಾಹಾರಿ . ಖುಷಿ ಆಯ್ತು :) ಸುಮಾರು 99 ಬಗೆ ಪರಾಟ ಇದೆ. ಸ್ವಲ್ಪ ತಲೆ ಕೆಡತ್ತೆ. ಹಸಿವು ವಿಪರೀತ ಆಗಿದ್ದರಿಂದ ತುಂಬಾ ಯೋಚನೆ ಮಾಡೋದಕ್ಕೆ ಹೋಗಲಿಲ್ಲ. 2 Drink, 2 ಪರಾಟ order ಮಾಡಿದ್ವಿ.
  • Mint & Lime Jaljeera : ಅದ್ಭುತ!
  • Mango lassi : ಸೂಪರ್ರು! Mild ಆಗಿ ಇತ್ತು.
  • Jaipuri Masala parantha : ದೊಡ್ಡದಾಗಿ ಇದೆ. ಮಹಾ ಏನ್ ರುಚಿ ಇಲ್ಲ. ಹಿಟ್ಟೇ ಜಾಸ್ತಿ. 3 ಚಪಾತಿ ತಿಂದಹಾಗೆ ಆಗತ್ತೆ. ಮೊಸರು, ಉಪ್ಪಿನಕಾಯಿ, ಪುದಿನ ಚಟ್ನಿ , ಟೊಮೇಟೊ ಚಟ್ನಿ, ಚನ್ನ ಮಸಾಲ ಕೊಡ್ತಾನೆ ಜೊತೆಗೆ.
  • Punjabi Masala parantha : ಇದು ಅಷ್ಟೇ. ಹೇಳ್ಕೊಳೋ ಹಾಗೆ ಏನ್ ಇಲ್ಲ.
chocolate ಪರಾಟ ಇತ್ತು. ಧೈರ್ಯ ಆಗ್ಲಿಲ್ಲ. ಹಾಗೆ ಹೊಟ್ಟೆಲಿ ಜಾಗನೂ ಇರ್ಲಿಲ್ಲ.
255 ರುಪಾಯಿ bill. ಪರಾಟ ನನಗೇನು ಇಷ್ಟ ಆಗ್ಲಿಲ್ಲ. ದೊಡ್ಡ ಆಯ್ತು. stuffing ಕಿಂತ ಹಿಟ್ಟು ಜಾಸ್ತಿ ಇರೋದರಿಂದ ಪೂರ ತಿನ್ನೋದಕ್ಕೆ ಬೋರ್ ಆಗತ್ತೆ. ಇದಕಿಂತ ಚೆನಾಗಿ ಇದೆ Mast Kalandar. ಜಲಜೀರ ಮತ್ತೆ ಲಸ್ಸಿ ಕುಡಿಯೋದಕ್ಕದ್ರೆ ಹೋಗಿ ಬನ್ನಿ.

Location : 28 A Cross, Geetha Colony, 4th Block, Jayanagar, Bangalore


ಊಟ ಮುಗಿಸಿ, shopping ಮಾಡಿ, ಮಳೆ ಶುರು ಆದ ಹೊತ್ತಿಗೆ ಒಂದೇ ಛತ್ರಿ ಲಿ ಇಬ್ರು ಕಷ್ಟ ಪಟ್ಕೊಂಡು 7th block ಲಿ ಇರೋ Natural Ice cream parlour ನ ಹುಡ್ಕಿಕೊಂಡು ಹೋದ್ವಿ. ಯಾವ್ದೋ ಮೂಲೇಲಿ ಇದೆ ಅದು. ಜನರೇ ಕಾಣ್ತಾ ಇರ್ಲಿಲ್ಲ ಹೆಚ್ಗೆ.
ಜಾಗ ಸಣ್ಣದು. ಒಂದು 5-6 chairs ಇದೆ ಅಷ್ಟೇ. ಕೂತು ಮಾತಾಡೋ ಅಂತ ಜಾಗ ಅಲ್ಲ. ಎಳನೀರು ಮತ್ತೆ ಹಲಸಿನಹಣ್ಣಿನ ಐಸ್ ಕ್ರೀಂ ತಗೊಂಡ್ವಿ. ಏಳನಿರಿನ ಗಂಜಿ taste :) ಸಣ್ಣ ಸಣ್ಣ ಚೂರು ಸಿಕ್ತು ಕೂಡ. ಹಲಸಿನ ಹಣ್ಣು ಸ್ವಲ್ಪ strong. ಹಣ ಇರೋದೇ ಹಾಗಲ್ವ.. ಅದೂ ಚೆನಾಗಿತ್ತು.
ಸೀತಾಫಲ, ಚಿಕ್ಕು, ಪಪಾಯ ಏನೆಲ್ಲಾ ಇತ್ತು. ನಂಗೆ ಜೋರು ಶೀತ ಆಗಿತ್ತ್ತು (ಇನ್ನು ಹೋಗಿಲ್ಲ) ಹಾಗಾಗಿ ಒಂದಕ್ಕೆ ನಿಲ್ಲಿಸಿದೆ :P 35 ರುಪಾಯಿ ಒಂದು scoop. ಸಣ್ಣ scoop. ಎರಡು ಅರಾಮಲ್ಲಿ ತಿನ್ನಬಹುದು. ಮತ್ತೆ ಬರಬೇಕು ಅಂತ ಮಾತಾಡ್ಕೊಂಡು ಮಳೆ ಗೆ ಕೊಡೆ ಹಿಡ್ದು,5-6 ಸಲ "ಅಕ್ಷಿ ಅಕ್ಷಿ " ಮಾಡ್ತಾ ವಾಪಾಸ್ ಬಂದ್ವಿ.

Location : Shop No.9, 10 Das Commercial Complex, No.825, Kanakapura Road, 7th Block, Jayanagar, Bangalore

ಮಳೆಗಾಲದಲ್ಲಿ ಮುನ್ನಾರ್


ಕೆಲಸಕ್ಕೆ ಸೇರಿ ಒಂದು ವರ್ಷ ಆಯ್ತು. ಇದು ನೆಪ ಈ trip ಹೋಗೋದಕ್ಕೆ. 15 ಜನರನ್ನ ಒಟ್ಟು ಮಾಡೋದು ಅಂದ್ರೆ ಕಪ್ಪೆನ ಹಿಡುದು ಕೊಳಗಕ್ಕೆ ಹಾಕಿದ ಹಾಗೇನೆ. ಎಷ್ಟು ಕಷ್ಟ ಪಟ್ರೂ 3 ಕಪ್ಪೆ escape! ಒಟ್ಟು 12 ಜನ. ಅದರಲ್ಲಿ ಇಬ್ರಿಗೆ ಮಾತ್ರ ಭಾಷೆ ಬರ್ತಾ ಇದ್ದಿದ್ದು ;) ಬೆಂಗಳೂರಿನಿಂದ ಕೊಯಿಂಬತ್ತುರು KSRTC ಬಸ್ಸಲ್ಲಿ, ಅಲ್ಲಿಂದ ಮುನ್ನಾರಿಗೆ ಮಿನಿ ಬಸ್ಸಲ್ಲಿ (ಬಾಡಿಗೆ ).

ಉಡಮಲಪೇಟೆಗೆ ತಲುಪೋ ಹೊತ್ತಿಗೆ ಸೂರ್ಯನಿಗೆ ಎಚ್ಚರ ಆಗಿತ್ತು. ಅಲ್ಲಿಂದ ಹತ್ತಿಪ್ಪತ್ತು ಕಿಲೋಮೀಟರು ರಸ್ತೆಯ ಎರಡೂ ಬದಿಗೆ wind mill! ನಾನು ಇದೇ ಮೊದಲು ನೋಡಿದ್ದು. ಎಷ್ಟು ಆಶ್ಚರ್ಯ ,ಸಂತೋಷ ಆಗಿತ್ತು ! :)
"ಸಿಂಗಂ" ಸಿನಿಮಾ ನೋಡ್ತಾ , ನಗ್ತಾ, ಆಡ್ಕೊಳ್ತಾ ,ತಮಿಳು ನಾಡು- ಕರ್ನಾಟಕ war ಮಾಡ್ತಾ ಮಾಡ್ತಾ ತಮಿಳುನಾಡು border ದಾಟಿದ್ವಿ. ಅಲ್ಲಿಂದ ಶುರು ಚಿನ್ನಾರ್ wild life sanctuary. ಅಷ್ಟೆಲ್ಲಾ ಹಸಿರು, ತೇವಾಂಶ ಕಾಣಲಿಲ್ಲ. ಕಾರಣ Dry deciduous forest ಅದು. ಮುಂದೆ ಮುಂದೆ ಹೋಗ್ತಾ ಇದ್ದ ಹಾಗೆ ಮಳೆ ಬಂದ ಕುರುಹು ಸಿಗ್ತಾ ಹೋಯ್ತು.

ಸರಾಯಿ ಅಂಗಡಿ, ಮಾಂಸದ ಅಂಗಡಿ ಮಧ್ಯ ಒಂದು ಚೆನಾಗಿರೋ ಹೋಟೆಲಲ್ಲಿ ಕೇರಳದ "ಅಪ್ಪಂ" ಮತ್ತೆ "ಕಡಲೈ" ತಿಂದು ಪ್ರಯಾಣ ಮುಂದುವರೆಸಿದ್ವಿ.ಇಲ್ಲಿಂದ ಮುಂದೆ ಚಹಾ ತೋಟ ಶುರು ಆಗಿದ್ದು ಮುನ್ನರುವರೆಗೂ , ಮುನ್ನಾರ್ ದಾಟಿ 20-30 ಕಿಲೋಮೀಟರ್ ವರೆಗೂ ರಸ್ತೆಯ ಎರಡೂ ಕಡೆ ಬರೀ ಚಹಾ ತೋಟ! ಇಷ್ಟೂ ಚಹಾ ತೋಟ tata company ಗೆ ಸೇರಿದ್ದು. ಕಣ್ಣನ್ ದೇವನ್ plantations. ಅಷ್ಟೆಲ್ಲಾ ಜನ ಕಾರ್ಮಿಕರನ್ನ manage ಮಾಡೋದು ಅಷ್ಟು ದೊಡ್ಡ ಕಂಪನಿಗೇ ಸರಿ. ಕೆಲಸದಲ್ಲಿ ನಿರತರಾಗಿರೋ ಕಾರ್ಮಿಕರು ಕಾಣಲೇ ಇಲ್ಲ. ಕೆಲವು ಜಾಗಗಲಂತೂ ಎಷ್ಟು steep ಇತ್ತು. ಅಲ್ಲೆಲ್ಲಾ ಹೋಗಿ ಚಹಾ ಚಿಗುರು ಹೇಗೆ ಕೀಳ್ತಾರೋ!

ಕಿಟಕಿ ಇಂದ ತಲೆ ಹೊರಗೆ ಹಾಕಿ enjoy ಮಾಡ್ತಾ ಇದ್ದೆ :) ರಸ್ತೆ ಬದಿಲೇ ಲಕ್ಕಮ್ ಜಲಪಾತ ಸಿಕ್ತು. ನೀರು ನೋಡಿದ ತಕ್ಷಣ ಎಲ್ಲರ ಮುಖದಲ್ಲೂ smile :) shoes ತೆಗದು, pant ಮಡಿಚಿ, ಕಾಲು ನೀರಿನ ಒಳಗೆ ಇಡ್ತಿವಿ....Freeze! ಕೆಲೋರು ಚಳಿ ತಡಿಲಾರದೆ ವಾಪಸು ದಂಡೆ ಮೇಲೆ ಹೋಗಿ ನಿಂತರು. ನಾವೆಲ್ಲಾ ನೀರ್ ಬೀಳೋ ಜಾಗಕ್ಕೆ ಹೋಗಿ pose ಕೊಟ್ವಿ ;) ನೋಡೋದಕ್ಕೆ Ravan ಸಿನಿಮಾ ಲಿ ಇರೋ ಜಲಪಾತದ mini version . ಎಲ್ಲಿಂದ ಎಲ್ಲಿಗೆ ಹೋದ್ರೂ 4 ಅಡಿ ಕಿಂತ ಹೆಚ್ಚು ನೀರಿಲ್ಲ. ಅರಾಮಲ್ಲಿ ಆಟ ಆಡಬಹುದು. ವಾಪಸು ಬರೋದಕ್ಕೆ ಮನಸ್ಸು ಇಲ್ಲದೆ ಇದ್ರೂನು ಕಾಲಿಗೆ ಚಳಿ ತಡೆದು ಕೊಳ್ಳುವ ಶಕ್ತಿ ಇರಲ್ಲಿಲ್ಲ. ಅಲ್ಲಿ ಇಲ್ಲಿ ನಿಂತು ಇನ್ನೊಂದ್ ಹತ್ತು photos ತೆಗದು , ಬಸ್ ಹತ್ತಿದ್ದಾಯ್ತು.

ಚಹಾ ತೋಟ ನೋಡ್ತಾ ನೋಡ್ತಾ ಮುನ್ನಾರ್ ತಲುಪಿದೆವು. "Shamrock Resort" ಲಿ ನಮ್ಮ booking ಆಗಿತ್ತು. ಅಲ್ಲಿಗೆ ಹೋಗೋದಕ್ಕೆ ಒಂದು dam ಮೇಲೆ ಹೋಗಬೇಕು. ಆದ್ರೆ ಆ ದಾರೀಲಿ mini bus ಹೋಗೋದಿಲ್ಲ. ಇನ್ನೊಂದು ದಾರಿ ಇದೆ, ಅದು Tata company ಯ private ರಸ್ತೆ. ಕಾಡಿ ಬೇಡಿ ಡ್ರೈವರ್ ಬಸ್ಸನ್ನ ಅಲ್ಲಿಂದ ತಂದ. ನಡಿಯೋದಕ್ಕೆ ಉತ್ಸಾಹ ಇರೋ ಜನ ನಡೆದುಕೊಂಡೇ ಹೋದ್ವಿ. ದಾರಿಯುದ್ದಕ್ಕೂ ಚಹಾ ತೋಟ. ಅದರ ಮಧ್ಯ resort ಗಳು. ಒಂದದಿಕ್ಕಿಂತ ಒಂದು super!
ನಡೆದು ನಡೆದು ಕೊನೆಗೂ ಒಂದು ಗುಡ್ಡದ ಬದಿಲಿ ನಮ್ ರೆಸಾರ್ಟ್! book ಮಾಡಿದ್ದು budget room ಆಗಿತ್ತು. ಅವರ ಹತ್ರ ಅಷ್ಟೆಲ್ಲ budget rooms ಇರ್ಲಿಲ್ಲ. Off season ಆದ ಕಾರಣ executive rooms Budget room tariff ಗೆ ಸಿಕ್ತು :) bed ಎದುರಿಗೆ ದೊಡ್ಡ ಕಿಟಕಿ. ಪರದೆ ಸರಿಸಿ ನೋಡಿದರೆ ಗುಡ್ಡ ,ಬೆಟ್ಟ, ಚಹಾ ತೋಟ, ಅಲ್ಲಲ್ಲಿ ಪುಟ್ಟ ಪುಟ್ಟ ಮನೆಗಳು. ಆಚೆ ನೋಡಿ ಪುನಃ
ಈಚೆ ನೋಡೋ ಹೊತ್ತಿಗೆ ಎಲ್ಲಾದು mist covered!
fresh ಆಗಿ ಊಟ ಮಾಡೋದಕ್ಕೆ Copper castle ಅನ್ನೋ ಜಾಗಕ್ಕೆ ಹೋದ್ವಿ. ಗುಡ್ಡದ edge ಗೆ ಇದೆ restaurant. ಎಂಥ view! ತಟ್ಟೆ ನೋಡೋದು ಬಿಟ್ಟು ಕಿಟಕಿ ಇಂದ ಆಚೆ ನೋಡ್ತಾ ಕೂತಿದ್ದೆ. ಎರಡು ಬೆಟ್ಟದ ನಡುವೆ ಹರಿಯೋ ನದಿ , ದೂರದಲ್ಲಿ dam, ಪಕ್ಕದ greeeeeeen ಬೆಟ್ಟ. ಅಬ್ಬ! ಸ್ವರ್ಗ! ಘಂಟೆ ಗಟ್ಲೆ ಕೂತು ಊಟ ಮಾಡಿ, ಅಂತು ೪ ಘಂಟೆಗೆ ಅಲ್ಲಿಂದ ಹೊರಟ್ವಿ. ಈ ಊರಲ್ಲಿ ಎಲ್ಲಾ tourist ಜಾಗಗಳು 5 ಕ್ಕೆ ಮುಚ್ಚಿ ಹೋಗತ್ತೆ. ಹಾಗಾಗಿ ನಮಗೆ ಸಮಯ ಹೆಚ್ಚು ಇರಲಿಲ್ಲ. ಯಾವುದಾದರು ಒಂದು ಜಾಗ ನೋಡಿ, ಪೇಟೆ ಸುತ್ತು ಹಾಕೋದು ಆ ದಿನದ program ಆಗಿತ್ತು. hydel park ಹೋದ್ವಿ. ಸುಮ್ಮನೆ 10 ರುಪಾಯಿ ಟಿಕೆಟು. ಏನ್ ಏನು ಇಲ್ಲ. ಒಂದ್ ಅರ್ಧ ಕಿಲೋಮೀಟರು ಗಿಡ ಮರಗಳು.ವಿಶೇಷ ಅಂದ್ರೆ ಒಂದ್ ಎರಡು turbine ಗಳು ಇದೆ. ಕೊನೆಯಲ್ಲಿ ಜೋಕಾಲಿ ಇತ್ತು. ಮರಕ್ಕೆ ಹಗ್ಗ ಕಟ್ಟಿ ಮಾಡಿದ ಜೋಕಾಲಿ. ಆ ದಿನ ನಾಗರಪಂಚಮಿ ಬೇರೆ. ಇರೋ ಎರಡು ಜೋಕಾಲಿಗೆ ಎಲ್ಲಾರೂ
ಕಿತ್ತಾಡಿ 5-5 ನಿಮಿಷ ಆಡಿ ಹೊರಗೆ ಬಂದ್ವಿ. ಮುನ್ನಾರ್ ಪೇಟೆ ಏನು ಮಹಾ ದೊಡ್ಡದಲ್ಲ. ಒಂದು ಘಂಟೆ ಬೇಕಾದ ಹಾಗೆ ಸಾಕು ತಿರುಗಾಡೋದಕ್ಕೆ. ಚಹಾ, tea tree oil, home made chocolates ಎಲ್ಲಾ ತಗೊಂಡು ಊಟ ಮುಗಿಸಿ resort ಕಡೆ ಹೋಗೋ ಹೊತ್ತಿಗೆ ಕತ್ತಲಾಗಿತ್ತು. room ಗೆ ಹೋಗಿ curtain ಸರಿಸ್ತಿನಿ, ಕಪ್ಪು ಗುಡ್ಡಗಳ ಮೇಲೆ, ಮಧ್ಯ ಸಣ್ಣ ಸಣ್ಣ ದೀಪಗಳು. ತಿರಗಾಡಿ ಬಂದ ಸುಸ್ತೆಲ್ಲ ಒಮ್ಮೆಲೇ ಮಾಯ! ಎಷ್ಟ್ ಹೊತ್ತು ಕೂತು ನೋಡಿದ್ವಿ ಅದ್ನ :)

ಮರು ದಿನ ಬೆಳಿಗ್ಗೆ 5 30 ಗೆ walking! ಎಲ್ಲಾ ಕಡೆ mist. ದಾರಿನೇ ಕಾಣ್ತಾ ಇರ್ಲಿಲ್ಲ. ಹಾಗಂತ ಚಳಿ ಏನ್ ಅಷ್ಟಿರಲಿಲ್ಲ. jacket, ಟೋಪಿ, socks ಎಲ್ಲಾ ಹಾಕೊಂಡ್ ಹೋಗಿದ್ದು ಶೆಖೆ ಆಗೋದಕ್ಕೆ ಶುರು ಆಯ್ತು. ಗುಡ್ಡದ ತುದಿವರೆಗೆ ಹೋದ್ರೂ, ಒಂದು ಲೋಟ ಚಹಾ ಸಿಗಲಿಲ್ಲ :( ರಸ್ತೆ ಬದಿಲಿ ಇರೋ ಗಿಡ ಮರ, ಹುಳ ಹುಪ್ಪಟೆಗಳನ್ನ recognise ಮಾಡ್ತಾ, ಅದರ ಬಗ್ಗೆ ಮಾತಾಡ್ತಾ ವಾಪಾಸ್ ಬಂದು ಬಿಸಿ ಬಿಸಿ ಪೂರಿ ಸಾಗು ತಿಂದಿದ್ ಆಯ್ತು.

room ಖಾಲಿ ಮಾಡಿ, Top station ಕಡೆಗೆ ಹೊರಟ್ವಿ. ಹೋಗೋ ದಾರೀಲಿ ಮಟ್ಟುಪೆಟ್ಟಿ dam backwater ಲಿ speed boating! ಎಷ್ಟ್ silent ಜಾಗ! ದೊಡ್ಡ ಕೆರೆ ಸುತ್ತ ಮುಗಿಲೆತ್ತರಕ್ಕೆ ಬೆಳೆದ ಮರಗಳ ಕಾಡು. perfect shooting spot!
ಅಲ್ಲಿಂದ ಕುಂದಲ dam. ಹೆಚ್ಚಿಗೆ ಏನ್ ವಿಶೇಷ ಇಲ್ಲ. gate ಕೂಡ ತೆಗೆದಿರಲಿಲ್ಲ. ಹಾಗಾಗಿ ಹೆಚ್ಚಿಗೆ ಹೊತ್ತು time spend ಮಾಡ್ಲಿಲ್ಲ.

ಅಲ್ಲಿಂದ eco point. ತುಂಬಾ ಗಲೀಜಾಗಿದೆ. ಜನಕ್ಕೆ plastic ನಿಷೇಧ ಅಂತ ಹೇಳಿದ್ರೆ ಯಾಕ್ ಅರ್ಥ ಆಗಲ್ವೋ! ಎಲ್ಲಾ ಕಡೆ bottle, chips packet. ಗಬ್ಬು ಮಾಡಿ ಹಾಕಿದಾರೆ. ಹೆಚ್ಚಗೆ ಹೊತ್ತು ಇರ್ಬೇಕು ಅಂತ ಅನ್ಸೋದೆ ಇಲ್ಲ. ಒಂದ್ ಜಾಗದಿಂದ ಕೂಗಿದರೆ, eco ಕೇಳತ್ತೆ. wallpaper material ಅಲ್ಲಿ landscape(ಪ್ಲಾಸ್ಟಿಕ್ ತೆಗದ್ರೆ)

ಅಲ್ಲಿಂದ top station. ಇದು ತಮಿಳು ನಾಡಲ್ಲಿ ಇರೋದು. private property. ಸ್ವಲ್ಪ ದೂರ ನಡದು, ಗುಡ್ಡ ಸ್ವಲ್ಪ (ಸ್ವಲ್ಪ ಜಾಸ್ತಿನೆ ) ಇಳಿದರೆ ಒಂದು view point. Panoramic view! ಅಬ್ಬ! ಮೋಡ/mist ಸರದ್ರೆ super view! more than 300 degrees view. ಸ್ವಲ್ಪ ಹೊತ್ತು ನಿಂತು ನೋಡಿ, ಒಂದ್ ಹತ್ತು photos ತೆಗದು ವಾಪಾಸ್. ಹತ್ತೋದು ಮಾತ್ರ ಬಾರಿ ಕಷ್ಟ. entrance ಗೆ ಬಂದ ಕೂಡಲೇ ಕೂರೋದಕ್ಕೆ ಬೆಂಚು ಹಾಕಿತ್ತಿದಾನೆ ಯಾವನೋ ಪುಣ್ಯಾತ್ಮ. lemon soda ಸಿಗತ್ತೆ. ಕುಡುದು ಸುಧಾರಿಸಿಕೊಂಡು,munnar ಪೇಟೆ ಲಿ ಊಟ ಮಾಡಿ concrete ಕಾಡಿಗೆ ವಾಪಾಸ್.

ಬರೋವಾಗ ದಾರೀಲಿ ಮಳೆ! ಕಿಟಕಿ ಗಾಜಿನ ಮೇಲೆ ನೀರಿನ ಹನಿ ಇಳಿತಾ ಇತ್ತು, background ಲಿ greeeeeen tea estate, ಬಸ್ ಒಳಗೆ ಹಾಡು. ಕಾಲು ಮುದಿರಿಕೊಂಡು ಕತ್ತಲಾಗೋ ವರೆಗೂ ನೋಡ್ತಾ... ಹಾಗೇ ನಿದ್ದೆ :)
PS: ಅಲ್ಲಿ ನೋಡಿದಷ್ಟು green color ನ shades ಬಹುಷಃ ಎಲ್ಲೂ ನೋಡೋದಕ್ಕೆ ಸಿಗಲ್ಲ.


Rolls United, Koramangala

ಸ್ವಲ್ಪ ದಿನದ ಹಿಂದೆ ಅಷ್ಟೇ burrp ಲಿ ನೋಡಿದ್ದೆ review. ಎಲ್ಲಾರೂ ಚೆನಾಗಿದೆ ಚೆನಾಗಿದೆ ಅಂತ ಹೇಳಿದ್ ನೋಡಿ ಹೋಗ್ಬೇಕು ಅಂತ mark ಮಾಡಿಟ್ಟೆ. ನಿನ್ನೆ friend ಮನೆಗೆ ಹೋಗಬೇಕಿತ್ತು. ಕೋರಮಂಗಲಕ್ಕೆ ಹತ್ರ ಆಗಿದ್ದರಿಂದ Rolls United ಗೆ ಊಟಕ್ಕೆ ಹೋಗೋದು ಅಂತ ಆಯ್ತು. ಮಡಿವಾಳ Total mall ಲಿ ಒಂದು burger ತಿಂದು, ಕೋರಮಂಗಲ 1st block ಗೆ ರಿಕ್ಷ ಗೆ ಕಾಯ್ತಾ ನಿಂತ್ವಿ. ಆಟೋದವರ ನಖರ ಗೊತ್ತಲ. ಒಂದಾನೊಂದು ಕೂಡ ಸಿಗಲಿಲ್ಲ. ಸರಿ ಇನ್ನೇನ್ ಮಹಾ ದೂರ ಇಲ್ಲ ಅಂತ ನದದುಕೊಂಡೆ ಹೊರಟ್ವಿ. ಈ ತಪ್ಪು ಮಾತ್ರ ಮಾಡಬೇಡಿ. ಸಿಕ್ಕಾಪಟ್ಟೆ ದೂರ ಇದೆ.
ಜಾಗ ಮಹಾ ಏನು ದೊಡ್ದದಾಗಿಲ್ಲ. 8 table ಇರಬಹುದು ಅಷ್ಟೇ. weekday ಟೇಬಲ್ ಸಿಗೋದು ಕಷ್ಟ ಇಲ್ಲ ( ನಮ್ಮನ್ನ ಬಿಟ್ರೆ ಇನ್ನೊಬ್ಬ ಇದ್ದ ಅಷ್ಟೇ) ಅರೇಬಿಯನ್ food festival ಅಂತೆ ಈ ತಿಂಗಳು. ಅವರ regular menu ಜೊತೆ ಅರೇಬಿಯ ತಿಂಡಿಗಳು ಸಿಗತ್ತೆ. ಸೊಪ್ಪು ತರಕಾರಿದು ಹೆಚ್ಚಿಗೆ ಕಾಣಲಿಲ್ಲ ಹಾಗಾಗಿ ಅರೇಬಿಯ ಕಡೆ ತಲೆ ಹಾಕಲಿಲ್ಲ.
Main menu ಲಿ ಸುಮಾರು ದೇಶದ ರೂಲ್ಸ್ ಇದೆ. ಹೆಸರಿನ ಪಕ್ಕದಲ್ಲಿ ದೇಶದ ಬಾವುಟ ಇದೆ.ಶಾಲೇಲಿ ಕಲೆತದ್ದು ನೆನಪಿದ್ರೆ ಸಹಾಯಕ್ಕೆ ಬರತ್ತೆ. ಇಲ್ಲ ಅಂದ್ರೆ waiter ನ ಕೇಳಬಹುದು. ಸರ್ವಿಸ್ ಪರವಾಗಿಲ್ಲ ಫಾಸ್ಟ್ ಇದೆ.

ನಾವು ತಿಂದದ್ದು:
Starter:
Shaka Momo: ಎಲೆ ಕೋಸು ಪಲ್ಯ ತುಂಬಿದ, ಹಬೆಯಲ್ಲಿ ಬೇಯಿಸಿದ ಮೋದಕ ;) ರುಚಿ ಇತ್ತು!! ಹಚ್ಚಿ ತಿನ್ನೋದಕ್ಕೆ ಚಟ್ನಿ
(ಈರುಳ್ಳಿ ಚಟ್ನಿ ಥರ ). ಖಾರ ಕಡಿಮೆ. Momo ಗೆ ಎಣ್ಣೆ ಜಾಸ್ತಿ (ಎಣ್ಣೆ ಯಾಕೆ ಹಾಕಿದರು ಅಂತ ಗೊತ್ತಿಲ್ಲ)




Samarkhand Shashlik:
ಪನೀರ್, ದೊಡ್ಡ ಮೆಣಸಿನ ಕಾಯಿ,ಟೊಮೇಟೊ ಇದನ್ನ cut ಮಾಡಿ, ಕಡ್ಡಿಗೆ ಚುಚ್ಚಿ, ಕೆಂಡದಲ್ಲಿ ಸ್ವಲ್ಪ ಸುಟ್ಟು ಮೇಲಿಂದ ಯಾವ್ದೋ ಚಟ್ನಿ ಹಾಕಿ ಕೊಟ್ಟಿದ್ರು.
ಫೋಟೋದಲ್ಲಿ ಒಂದೇ ಕಡ್ಡಿ ಇದೆ. ಆದರೆ 3 ಕಡ್ಡಿ ಕೊಟ್ಟಿದ್ರು. 2 ಕಡ್ಡಿ ಖಾಲಿ ಮಾಡಿದ ಮೇಲೆ ಫೋಟೋ ತೆಗಿಯೋ
ದಕ್ಕೆ ನೆನಪಾಗಿದ್ದು :)




Main course :
Fajita Vegitarianos :

Mexico ದೇಶದ್ದು ಇದು. ಮೈದಾ ಹಿಟ್ಟಿನ ಚಪಾತಿ ಒಳಗೆ ಎಲ್ಲಾ ಒಳ್ಳೊಳ್ಳೆ ತರಕಾರಿಗಳ super spicy ಪಲ್ಯ ಹಾಕಿದ roll, fried rice ಜೊತೆ.

ಇದಕ್ಕೆ ಒಂದ್ ಬಗೆಯ ಗೊಜ್ಜು,ಮೊಸರು ಥರದ್ದು ಏನೋ ಒಂದುಕೊಟ್ಟಿದ್ರು. roll ಮತ್ತು ಗೊಜ್ಜು ತುಂಬಾನೇಚೆ

ನಾಗಿತ್ತು! Roll ಒಳಗಡೆ ಹಾಕಿದ್ದ ಪಲ್ಯ ಅನ್ನಕ್ಕೆ ಹಾಕಿ ಕಲಸಿದ ಹಾಗಿತ್ತು friedರೈಸ್ ;)

ರೋಲ್ ಸಕತ್ ಆಗಿತ್ತು. ಆಸೆ ಆಗ್ತಾ ಇದೆ!



Dessert:
Bird`s Nest
Flat noodles
ನ ಎಣ್ಣೇಲಿ ಕರಿದು, ಜೀನಲ್ಲಿ
ಅದ್ದಿ
ತೆಗದು, ಅದರ ಮೇಲಿಂದ ಒಂದೇ ಒಂದು scoop ice cream
, ಅದರ ಮೇಲೆ ಸ್ವಲ್ಪ chocolate sauce
. ತುಂಬಾ ಸಿಹಿ ಇತ್ತು. Ice cream
ಇನ್ನೊಂದು ಸ್ಕೂಪ್ ಆದ್ರೂ ಬೇಕಿತ್ತು.





ಒಟ್ಟಾರೆ ಬೇರೆ ಥರದ ಊಟ. ಇಷ್ಟ ಆಯ್ತು. ಹೋಗಬಹುದು.
Qucik Look:
Location :
No. 15, 1st Main Road, 1st Block, Koramangala, Bangalore
Price : Average meal for 2 costs Rs.350
Ambiance: Not very great.
Food Type: I can say international (you get Indian also)