ಮಳೆಗಾಲದಲ್ಲಿ ಮುನ್ನಾರ್


ಕೆಲಸಕ್ಕೆ ಸೇರಿ ಒಂದು ವರ್ಷ ಆಯ್ತು. ಇದು ನೆಪ ಈ trip ಹೋಗೋದಕ್ಕೆ. 15 ಜನರನ್ನ ಒಟ್ಟು ಮಾಡೋದು ಅಂದ್ರೆ ಕಪ್ಪೆನ ಹಿಡುದು ಕೊಳಗಕ್ಕೆ ಹಾಕಿದ ಹಾಗೇನೆ. ಎಷ್ಟು ಕಷ್ಟ ಪಟ್ರೂ 3 ಕಪ್ಪೆ escape! ಒಟ್ಟು 12 ಜನ. ಅದರಲ್ಲಿ ಇಬ್ರಿಗೆ ಮಾತ್ರ ಭಾಷೆ ಬರ್ತಾ ಇದ್ದಿದ್ದು ;) ಬೆಂಗಳೂರಿನಿಂದ ಕೊಯಿಂಬತ್ತುರು KSRTC ಬಸ್ಸಲ್ಲಿ, ಅಲ್ಲಿಂದ ಮುನ್ನಾರಿಗೆ ಮಿನಿ ಬಸ್ಸಲ್ಲಿ (ಬಾಡಿಗೆ ).

ಉಡಮಲಪೇಟೆಗೆ ತಲುಪೋ ಹೊತ್ತಿಗೆ ಸೂರ್ಯನಿಗೆ ಎಚ್ಚರ ಆಗಿತ್ತು. ಅಲ್ಲಿಂದ ಹತ್ತಿಪ್ಪತ್ತು ಕಿಲೋಮೀಟರು ರಸ್ತೆಯ ಎರಡೂ ಬದಿಗೆ wind mill! ನಾನು ಇದೇ ಮೊದಲು ನೋಡಿದ್ದು. ಎಷ್ಟು ಆಶ್ಚರ್ಯ ,ಸಂತೋಷ ಆಗಿತ್ತು ! :)
"ಸಿಂಗಂ" ಸಿನಿಮಾ ನೋಡ್ತಾ , ನಗ್ತಾ, ಆಡ್ಕೊಳ್ತಾ ,ತಮಿಳು ನಾಡು- ಕರ್ನಾಟಕ war ಮಾಡ್ತಾ ಮಾಡ್ತಾ ತಮಿಳುನಾಡು border ದಾಟಿದ್ವಿ. ಅಲ್ಲಿಂದ ಶುರು ಚಿನ್ನಾರ್ wild life sanctuary. ಅಷ್ಟೆಲ್ಲಾ ಹಸಿರು, ತೇವಾಂಶ ಕಾಣಲಿಲ್ಲ. ಕಾರಣ Dry deciduous forest ಅದು. ಮುಂದೆ ಮುಂದೆ ಹೋಗ್ತಾ ಇದ್ದ ಹಾಗೆ ಮಳೆ ಬಂದ ಕುರುಹು ಸಿಗ್ತಾ ಹೋಯ್ತು.

ಸರಾಯಿ ಅಂಗಡಿ, ಮಾಂಸದ ಅಂಗಡಿ ಮಧ್ಯ ಒಂದು ಚೆನಾಗಿರೋ ಹೋಟೆಲಲ್ಲಿ ಕೇರಳದ "ಅಪ್ಪಂ" ಮತ್ತೆ "ಕಡಲೈ" ತಿಂದು ಪ್ರಯಾಣ ಮುಂದುವರೆಸಿದ್ವಿ.ಇಲ್ಲಿಂದ ಮುಂದೆ ಚಹಾ ತೋಟ ಶುರು ಆಗಿದ್ದು ಮುನ್ನರುವರೆಗೂ , ಮುನ್ನಾರ್ ದಾಟಿ 20-30 ಕಿಲೋಮೀಟರ್ ವರೆಗೂ ರಸ್ತೆಯ ಎರಡೂ ಕಡೆ ಬರೀ ಚಹಾ ತೋಟ! ಇಷ್ಟೂ ಚಹಾ ತೋಟ tata company ಗೆ ಸೇರಿದ್ದು. ಕಣ್ಣನ್ ದೇವನ್ plantations. ಅಷ್ಟೆಲ್ಲಾ ಜನ ಕಾರ್ಮಿಕರನ್ನ manage ಮಾಡೋದು ಅಷ್ಟು ದೊಡ್ಡ ಕಂಪನಿಗೇ ಸರಿ. ಕೆಲಸದಲ್ಲಿ ನಿರತರಾಗಿರೋ ಕಾರ್ಮಿಕರು ಕಾಣಲೇ ಇಲ್ಲ. ಕೆಲವು ಜಾಗಗಲಂತೂ ಎಷ್ಟು steep ಇತ್ತು. ಅಲ್ಲೆಲ್ಲಾ ಹೋಗಿ ಚಹಾ ಚಿಗುರು ಹೇಗೆ ಕೀಳ್ತಾರೋ!

ಕಿಟಕಿ ಇಂದ ತಲೆ ಹೊರಗೆ ಹಾಕಿ enjoy ಮಾಡ್ತಾ ಇದ್ದೆ :) ರಸ್ತೆ ಬದಿಲೇ ಲಕ್ಕಮ್ ಜಲಪಾತ ಸಿಕ್ತು. ನೀರು ನೋಡಿದ ತಕ್ಷಣ ಎಲ್ಲರ ಮುಖದಲ್ಲೂ smile :) shoes ತೆಗದು, pant ಮಡಿಚಿ, ಕಾಲು ನೀರಿನ ಒಳಗೆ ಇಡ್ತಿವಿ....Freeze! ಕೆಲೋರು ಚಳಿ ತಡಿಲಾರದೆ ವಾಪಸು ದಂಡೆ ಮೇಲೆ ಹೋಗಿ ನಿಂತರು. ನಾವೆಲ್ಲಾ ನೀರ್ ಬೀಳೋ ಜಾಗಕ್ಕೆ ಹೋಗಿ pose ಕೊಟ್ವಿ ;) ನೋಡೋದಕ್ಕೆ Ravan ಸಿನಿಮಾ ಲಿ ಇರೋ ಜಲಪಾತದ mini version . ಎಲ್ಲಿಂದ ಎಲ್ಲಿಗೆ ಹೋದ್ರೂ 4 ಅಡಿ ಕಿಂತ ಹೆಚ್ಚು ನೀರಿಲ್ಲ. ಅರಾಮಲ್ಲಿ ಆಟ ಆಡಬಹುದು. ವಾಪಸು ಬರೋದಕ್ಕೆ ಮನಸ್ಸು ಇಲ್ಲದೆ ಇದ್ರೂನು ಕಾಲಿಗೆ ಚಳಿ ತಡೆದು ಕೊಳ್ಳುವ ಶಕ್ತಿ ಇರಲ್ಲಿಲ್ಲ. ಅಲ್ಲಿ ಇಲ್ಲಿ ನಿಂತು ಇನ್ನೊಂದ್ ಹತ್ತು photos ತೆಗದು , ಬಸ್ ಹತ್ತಿದ್ದಾಯ್ತು.

ಚಹಾ ತೋಟ ನೋಡ್ತಾ ನೋಡ್ತಾ ಮುನ್ನಾರ್ ತಲುಪಿದೆವು. "Shamrock Resort" ಲಿ ನಮ್ಮ booking ಆಗಿತ್ತು. ಅಲ್ಲಿಗೆ ಹೋಗೋದಕ್ಕೆ ಒಂದು dam ಮೇಲೆ ಹೋಗಬೇಕು. ಆದ್ರೆ ಆ ದಾರೀಲಿ mini bus ಹೋಗೋದಿಲ್ಲ. ಇನ್ನೊಂದು ದಾರಿ ಇದೆ, ಅದು Tata company ಯ private ರಸ್ತೆ. ಕಾಡಿ ಬೇಡಿ ಡ್ರೈವರ್ ಬಸ್ಸನ್ನ ಅಲ್ಲಿಂದ ತಂದ. ನಡಿಯೋದಕ್ಕೆ ಉತ್ಸಾಹ ಇರೋ ಜನ ನಡೆದುಕೊಂಡೇ ಹೋದ್ವಿ. ದಾರಿಯುದ್ದಕ್ಕೂ ಚಹಾ ತೋಟ. ಅದರ ಮಧ್ಯ resort ಗಳು. ಒಂದದಿಕ್ಕಿಂತ ಒಂದು super!
ನಡೆದು ನಡೆದು ಕೊನೆಗೂ ಒಂದು ಗುಡ್ಡದ ಬದಿಲಿ ನಮ್ ರೆಸಾರ್ಟ್! book ಮಾಡಿದ್ದು budget room ಆಗಿತ್ತು. ಅವರ ಹತ್ರ ಅಷ್ಟೆಲ್ಲ budget rooms ಇರ್ಲಿಲ್ಲ. Off season ಆದ ಕಾರಣ executive rooms Budget room tariff ಗೆ ಸಿಕ್ತು :) bed ಎದುರಿಗೆ ದೊಡ್ಡ ಕಿಟಕಿ. ಪರದೆ ಸರಿಸಿ ನೋಡಿದರೆ ಗುಡ್ಡ ,ಬೆಟ್ಟ, ಚಹಾ ತೋಟ, ಅಲ್ಲಲ್ಲಿ ಪುಟ್ಟ ಪುಟ್ಟ ಮನೆಗಳು. ಆಚೆ ನೋಡಿ ಪುನಃ
ಈಚೆ ನೋಡೋ ಹೊತ್ತಿಗೆ ಎಲ್ಲಾದು mist covered!
fresh ಆಗಿ ಊಟ ಮಾಡೋದಕ್ಕೆ Copper castle ಅನ್ನೋ ಜಾಗಕ್ಕೆ ಹೋದ್ವಿ. ಗುಡ್ಡದ edge ಗೆ ಇದೆ restaurant. ಎಂಥ view! ತಟ್ಟೆ ನೋಡೋದು ಬಿಟ್ಟು ಕಿಟಕಿ ಇಂದ ಆಚೆ ನೋಡ್ತಾ ಕೂತಿದ್ದೆ. ಎರಡು ಬೆಟ್ಟದ ನಡುವೆ ಹರಿಯೋ ನದಿ , ದೂರದಲ್ಲಿ dam, ಪಕ್ಕದ greeeeeeen ಬೆಟ್ಟ. ಅಬ್ಬ! ಸ್ವರ್ಗ! ಘಂಟೆ ಗಟ್ಲೆ ಕೂತು ಊಟ ಮಾಡಿ, ಅಂತು ೪ ಘಂಟೆಗೆ ಅಲ್ಲಿಂದ ಹೊರಟ್ವಿ. ಈ ಊರಲ್ಲಿ ಎಲ್ಲಾ tourist ಜಾಗಗಳು 5 ಕ್ಕೆ ಮುಚ್ಚಿ ಹೋಗತ್ತೆ. ಹಾಗಾಗಿ ನಮಗೆ ಸಮಯ ಹೆಚ್ಚು ಇರಲಿಲ್ಲ. ಯಾವುದಾದರು ಒಂದು ಜಾಗ ನೋಡಿ, ಪೇಟೆ ಸುತ್ತು ಹಾಕೋದು ಆ ದಿನದ program ಆಗಿತ್ತು. hydel park ಹೋದ್ವಿ. ಸುಮ್ಮನೆ 10 ರುಪಾಯಿ ಟಿಕೆಟು. ಏನ್ ಏನು ಇಲ್ಲ. ಒಂದ್ ಅರ್ಧ ಕಿಲೋಮೀಟರು ಗಿಡ ಮರಗಳು.ವಿಶೇಷ ಅಂದ್ರೆ ಒಂದ್ ಎರಡು turbine ಗಳು ಇದೆ. ಕೊನೆಯಲ್ಲಿ ಜೋಕಾಲಿ ಇತ್ತು. ಮರಕ್ಕೆ ಹಗ್ಗ ಕಟ್ಟಿ ಮಾಡಿದ ಜೋಕಾಲಿ. ಆ ದಿನ ನಾಗರಪಂಚಮಿ ಬೇರೆ. ಇರೋ ಎರಡು ಜೋಕಾಲಿಗೆ ಎಲ್ಲಾರೂ
ಕಿತ್ತಾಡಿ 5-5 ನಿಮಿಷ ಆಡಿ ಹೊರಗೆ ಬಂದ್ವಿ. ಮುನ್ನಾರ್ ಪೇಟೆ ಏನು ಮಹಾ ದೊಡ್ಡದಲ್ಲ. ಒಂದು ಘಂಟೆ ಬೇಕಾದ ಹಾಗೆ ಸಾಕು ತಿರುಗಾಡೋದಕ್ಕೆ. ಚಹಾ, tea tree oil, home made chocolates ಎಲ್ಲಾ ತಗೊಂಡು ಊಟ ಮುಗಿಸಿ resort ಕಡೆ ಹೋಗೋ ಹೊತ್ತಿಗೆ ಕತ್ತಲಾಗಿತ್ತು. room ಗೆ ಹೋಗಿ curtain ಸರಿಸ್ತಿನಿ, ಕಪ್ಪು ಗುಡ್ಡಗಳ ಮೇಲೆ, ಮಧ್ಯ ಸಣ್ಣ ಸಣ್ಣ ದೀಪಗಳು. ತಿರಗಾಡಿ ಬಂದ ಸುಸ್ತೆಲ್ಲ ಒಮ್ಮೆಲೇ ಮಾಯ! ಎಷ್ಟ್ ಹೊತ್ತು ಕೂತು ನೋಡಿದ್ವಿ ಅದ್ನ :)

ಮರು ದಿನ ಬೆಳಿಗ್ಗೆ 5 30 ಗೆ walking! ಎಲ್ಲಾ ಕಡೆ mist. ದಾರಿನೇ ಕಾಣ್ತಾ ಇರ್ಲಿಲ್ಲ. ಹಾಗಂತ ಚಳಿ ಏನ್ ಅಷ್ಟಿರಲಿಲ್ಲ. jacket, ಟೋಪಿ, socks ಎಲ್ಲಾ ಹಾಕೊಂಡ್ ಹೋಗಿದ್ದು ಶೆಖೆ ಆಗೋದಕ್ಕೆ ಶುರು ಆಯ್ತು. ಗುಡ್ಡದ ತುದಿವರೆಗೆ ಹೋದ್ರೂ, ಒಂದು ಲೋಟ ಚಹಾ ಸಿಗಲಿಲ್ಲ :( ರಸ್ತೆ ಬದಿಲಿ ಇರೋ ಗಿಡ ಮರ, ಹುಳ ಹುಪ್ಪಟೆಗಳನ್ನ recognise ಮಾಡ್ತಾ, ಅದರ ಬಗ್ಗೆ ಮಾತಾಡ್ತಾ ವಾಪಾಸ್ ಬಂದು ಬಿಸಿ ಬಿಸಿ ಪೂರಿ ಸಾಗು ತಿಂದಿದ್ ಆಯ್ತು.

room ಖಾಲಿ ಮಾಡಿ, Top station ಕಡೆಗೆ ಹೊರಟ್ವಿ. ಹೋಗೋ ದಾರೀಲಿ ಮಟ್ಟುಪೆಟ್ಟಿ dam backwater ಲಿ speed boating! ಎಷ್ಟ್ silent ಜಾಗ! ದೊಡ್ಡ ಕೆರೆ ಸುತ್ತ ಮುಗಿಲೆತ್ತರಕ್ಕೆ ಬೆಳೆದ ಮರಗಳ ಕಾಡು. perfect shooting spot!
ಅಲ್ಲಿಂದ ಕುಂದಲ dam. ಹೆಚ್ಚಿಗೆ ಏನ್ ವಿಶೇಷ ಇಲ್ಲ. gate ಕೂಡ ತೆಗೆದಿರಲಿಲ್ಲ. ಹಾಗಾಗಿ ಹೆಚ್ಚಿಗೆ ಹೊತ್ತು time spend ಮಾಡ್ಲಿಲ್ಲ.

ಅಲ್ಲಿಂದ eco point. ತುಂಬಾ ಗಲೀಜಾಗಿದೆ. ಜನಕ್ಕೆ plastic ನಿಷೇಧ ಅಂತ ಹೇಳಿದ್ರೆ ಯಾಕ್ ಅರ್ಥ ಆಗಲ್ವೋ! ಎಲ್ಲಾ ಕಡೆ bottle, chips packet. ಗಬ್ಬು ಮಾಡಿ ಹಾಕಿದಾರೆ. ಹೆಚ್ಚಗೆ ಹೊತ್ತು ಇರ್ಬೇಕು ಅಂತ ಅನ್ಸೋದೆ ಇಲ್ಲ. ಒಂದ್ ಜಾಗದಿಂದ ಕೂಗಿದರೆ, eco ಕೇಳತ್ತೆ. wallpaper material ಅಲ್ಲಿ landscape(ಪ್ಲಾಸ್ಟಿಕ್ ತೆಗದ್ರೆ)

ಅಲ್ಲಿಂದ top station. ಇದು ತಮಿಳು ನಾಡಲ್ಲಿ ಇರೋದು. private property. ಸ್ವಲ್ಪ ದೂರ ನಡದು, ಗುಡ್ಡ ಸ್ವಲ್ಪ (ಸ್ವಲ್ಪ ಜಾಸ್ತಿನೆ ) ಇಳಿದರೆ ಒಂದು view point. Panoramic view! ಅಬ್ಬ! ಮೋಡ/mist ಸರದ್ರೆ super view! more than 300 degrees view. ಸ್ವಲ್ಪ ಹೊತ್ತು ನಿಂತು ನೋಡಿ, ಒಂದ್ ಹತ್ತು photos ತೆಗದು ವಾಪಾಸ್. ಹತ್ತೋದು ಮಾತ್ರ ಬಾರಿ ಕಷ್ಟ. entrance ಗೆ ಬಂದ ಕೂಡಲೇ ಕೂರೋದಕ್ಕೆ ಬೆಂಚು ಹಾಕಿತ್ತಿದಾನೆ ಯಾವನೋ ಪುಣ್ಯಾತ್ಮ. lemon soda ಸಿಗತ್ತೆ. ಕುಡುದು ಸುಧಾರಿಸಿಕೊಂಡು,munnar ಪೇಟೆ ಲಿ ಊಟ ಮಾಡಿ concrete ಕಾಡಿಗೆ ವಾಪಾಸ್.

ಬರೋವಾಗ ದಾರೀಲಿ ಮಳೆ! ಕಿಟಕಿ ಗಾಜಿನ ಮೇಲೆ ನೀರಿನ ಹನಿ ಇಳಿತಾ ಇತ್ತು, background ಲಿ greeeeeen tea estate, ಬಸ್ ಒಳಗೆ ಹಾಡು. ಕಾಲು ಮುದಿರಿಕೊಂಡು ಕತ್ತಲಾಗೋ ವರೆಗೂ ನೋಡ್ತಾ... ಹಾಗೇ ನಿದ್ದೆ :)
PS: ಅಲ್ಲಿ ನೋಡಿದಷ್ಟು green color ನ shades ಬಹುಷಃ ಎಲ್ಲೂ ನೋಡೋದಕ್ಕೆ ಸಿಗಲ್ಲ.