Pondicherry



ಮೊನ್ನೆ weekend ಹೋಗಿದ್ದು ಪಾಂಡಿಚೆರಿಗೆ. ಒಳ್ಳೆ ಸಮಯ ಅಲ್ಲ ಅಂತ ಗೊತ್ತಿತ್ತು, ಆದ್ರೆ ಏನ್ ಮಾಡದು? ನವೆಂಬರ ತನಕ ಕಾಯೋ ಅಷ್ಟು patience ಇಲ್ವೆ. 7 ಹುಡುಗಿಯರು , ಒಂದು ತಿಂಗಳು plan ಮಾಡಿ, ಶುಕ್ರವಾರ ರಾತ್ರಿ "ಗರೀಬ್ ರಥ" train ಲಿ ಹೊರಟ್ವಿ. 390 ರುಪಾಯಿ ಟಿಕೆಟು. AC ರೈಲು. 11:15 ಕ್ಕೆ ಯಶವಂತಪುರ ಇಂದ ಶುರು trip. ರೈಲು ಚೆನಾಗಿದೆ. ಖಾಲಿ ಹೊಡಿಯತ್ತೆ. ಜನ on the spot ಟಿಕೆಟು ತಗೊಂಡು ಹತ್ಕೊತಾರೆ. ಆದರೂ ಖಾಲಿ. ಎಲ್ಲಾ ಕಡೆನೂ ನಿಲ್ಲಿಸಿ ನಿಲ್ಲಿಸಿ ಸುಮಾರು 9:45 ಕ್ಕೆ ತಲುಪಿಸುತ್ತಾನೆ. kailash guest house ಲಿ ನಮ್ಮ room book ಆಗಿತ್ತು. ಇಲ್ಲಿಂದ ಸುಮಾರು 2-3 km ದೂರ ಇರಬಹುದು. ಆಟೋ ಜನ ತುಂಬಾ ರಗಳೆ. ಬಾಯಿಗೆ ಬಂದಿದ್ದು rate ಹೇಳ್ತಾರೆ. ಸ್ವಲ್ಪ ಹುಷಾರಾಗಿ ಇರಬೇಕು. ತಮಿಳು ಬಂದ್ರೆ ತುಂಬಾ ಒಳ್ಳೇದು. ನಮ್ಮ ಜೊತೇಲಿ ತಮಿಳು ಬರೋಳು ಇದ್ಲು. ಹಾಗಾಗಿ ಅಷ್ಟೆಲ್ಲಾ ಕಷ್ಟ ಆಗ್ಲಿಲ್ಲ.

ಸಣ್ಣ ಇದೆ ರೂಮು, red oxide flooring,carpet ಬದಲು ಚಾಪೆ ನೆಲದ ಮೇಲೆ. 2 ಜನ ಇರಬಹುದು, Rs900, AC ಇದೆ. ಊರು ಮಧ್ಯದಲ್ಲಿ ಇದೆ. owner ಕೂಡ helpful ಇದಾರೆ.

ಎದುರಿಗೆ ಇರೋ "ಶ್ರೀ ಕೃಷ್ಣ sweets" ಲಿ mini idli ತಿಂದ್ವಿ. ತುಪ್ಪ ಸುರುದು ಕೊಟ್ಟಿದ್ರು ಸಂಭಾರಿಗೆ. ಆಹಾ!ಎಷ್ಟು ಒಳ್ಳೆ ಪರಿಮಳ:) fresh ಆಗಿ, ತಿರುಗಾಟ ಶುರು ಮಾಡೋವಾಗ 12 ಘಂಟೆ ಆಗಿತ್ತು. direct ಆಗಿ auroville ಗೆ ಹೊರಟ್ವಿ. ಆಟೋ ಲಿ 5 ಜನ, Activa ಲಿ ಇಬ್ರು. ನಿಮ್ಮ ಹತ್ರ Driving license ಇದ್ರೆ, two wheeler rent ಗೆ ತಗೋಬಹುದು. 150 ರುಪಾಯಿ ಒಂದು ದಿನಕ್ಕೆ. ಪೆಟ್ರೋಲ್ ನೀವೇ ಹಾಕೋಬೇಕು. ಪೆಟ್ರೋಲ್ ಬೆಲೆ ಬೆಂಗಳೂರಿಗಿಂತ 7-8 ರುಪಾಯಿ ಕಡಿಮೆ! Auroville ಗೆ ಹೋಗೋ ಅಷ್ಟರಲ್ಲಿ, ಮೈ ಎಲ್ಲಾ ಅಂಟು. ವಿಪರೀತ ಶೆಖೆ. ಆಯ್ತು ಆಯ್ತು, ಶೆಖೆಗಾಲದಲ್ಲಿ ಕಡಲ ತೀರಕ್ಕೆ ಹೋಗಿ, complaint ಮಾಡಬಾರದು, ಆದರು ತುಂಬಾನೇ ಶೆಖೆ ಇತ್ತಪ್ಪ. auroville ಲಿ ಆಶ್ರಮ ನೋಡಿದ್ವಿ. "ಮಾತ್ರಿ ಮಂದಿರ " ಮಹತ್ವ, ಉದ್ದೇಶ, making ಎಲ್ಲಾ ಇರೋ video ನೋಡಿದ್ವಿ. ಜಗತ್ತಿನ ಎಲ್ಲಾ ದೇಶದಿಂದ ಹಿಡಿ ಮಣ್ಣನ್ನು ತಂದು ಇಲ್ಲಿ ಹಾಕಿದಾರೆ, ಏಕತಯ ಪ್ರತೀಕ ಇದು. ಮಾತ್ರಿ ಮಂದಿರ ಒಳಗಡೆ ಎಲ್ಲರನ್ನು ಬಿಡೋದಿಲ್ಲ. ಧ್ಯಾನ ಮಂದಿರ ಅದು. ದೂರದಿಂದ ನೋಡಬಹುದು. ಆದರೆ ತುಂಬಾ ನಡಿಬೇಕು. ಅಷ್ಟೆಲ್ಲ ಶಕ್ತಿ ಇರಲಿಲ್ಲ. ಹಾಗಾಗಿ ಹೋಗಲಿಲ್ಲ ನಾವು. ಹೊಟ್ಟೆ ಬೇರೆ ಹಸಿವಾಗಿತ್ತು. ಅಲ್ಲೇ ಇರೋ ಹೋಟೆಲಿನಲ್ಲಿ ಚಪಾತಿ ಪಲ್ಯ ತಿಂದ್ವಿ. ಪರವಾಗಿಲ್ಲ ಊಟ. 45 ರುಪಾಯಿ ಗೆ 3 ಚಪಾತಿ, ಸಾಕಷ್ಟು ಪಲ್ಯ. ಅದ್ನ ತಿಂದು ನಿಂಬೆ ಹುಳಿ ಪಾನಕ ಕುಡಿದು, ಅಲೆ ಇರೋ boutique ಗಳನ್ನ ಭೇಟಿ ಮಾಡಿದ್ವಿ. ಎಷ್ಟ್ ಚಂದ ಚಂದ colors! cute cute sweaters! ಸ್ವಲ್ಪ expensive. ತುಂಬಾ ಒಳ್ಳೆ ಪರಿಮಳ ಇರೋ ಮೇಣದ ಬತ್ತಿ, ಅಗರಬತ್ತಿ, ಸೋಪು ಎಲ್ಲಾ ಸಿಗತ್ತೆ. stationary ಸಾಮಾನು ಎಷ್ಟು ಚೆನಾಗಿದೆ ಗೊತ್ತಾ? ಆಸೆ ಆಗತ್ತೆ. ಆದ್ರೆ ಚೆನ್ನಾಗಿ ಬೋಳಿಸಿ ಕಳಿಸ್ತಾರೆ. ಎಲ್ಲಾ ನೋಡ್ಕೊಂಡು , auroville ಇಂದ ಹೋರಟು, ಚುನ್ನಂಬಾರ್ backwater. ಇಲ್ಲಿಂದ ದೋಣಿಯಲ್ಲಿ paradise beach. ಶೆಖೆಲಿ ಬಾಡಿದ್ದ ಮುಖಗಳು beach ನೋಡಿದ ಅರಳಿ ಹೋಯ್ತು! :) ಚೆನಾಗಿ ಆಟ ಆಡಿ,ಒಂದು ರಾಶಿ photos ತೆಗಿದ್ವಿ. ಅಲ್ಲಿಂದ ಪುನಃ ದೋಣಿಲಿ ಚುನ್ನಂಬಾರು. ಹೋಗಿ ಬರೋದಕ್ಕೆ ಸೇರಿ 75 ರುಪಾಯಿ. next stop "Anglo French Textiles". ಇದು ಸುಮಾರು 150 ವರ್ಷ ಹಳೆಯದಂತೆ. fabric ಚೆನಾಗಿ ಸಿಗತ್ತೆ, ಬೆಲೆ ಕೂಡ ಕಡಿಮೆ ಅಂತwebsites ಲಿ ನೋಡಿ ಹೋಗಿ ಮಂಗ ಆದ್ವಿ. ನ್ಏನೂ ಇಲ್ಲ ಅಲ್ಲಿ. ಸುಮ್ನೆ ಹೋಗಿದ್ದಾಯ್ತು ಅಲ್ಲಿ ತನಕ. ಆಟೋ ಮಾಮ 500 ರುಪಾಯಿ charge ಮಾಡ್ದ. ಪರವಾಗಿಲ್ಲ ಅಲ? next ಕೆಲಸ, fresh ಆಗಿ, eating n shopping! Hot Breads ಲಿ ಕಾಂಟಿನೆಂಟಲ್ ಊಟ! ಅದೇ ಬ್ರೆಡ್ಡು ಬನ್ನು :P ಚೆನಾಗಿತ್ತು ಆದರೆ.

Mission Street, JL Nehru Street ಎಲ್ಲಾ ಸುತ್ತಾಡಿ, ಅಂಗಡಿ ಬಾಗಿಲೆಲ್ಲಾ ಮುಚ್ಚಿ ಆದಮೇಲೆನೆ ವಾಪಸು ಬಂದು ಮಲಗಿದ್ದು. ಎರಡೂ ರಸ್ತೆಲೂ ಬೇಕಾದಷ್ಟು ಅಂಗಡಿಗಳಿವೆ. ಕರಕುಶಲ ವಸ್ತುಗಳು, bedsheets, curtains, ಕಾಟನ್ ಸೀರೆ, skirts, tops, pants.... ಏನ್ ಇಲ್ಲ ಇಲ್ಲಿ? ಆಶ್ಚರ್ಯ ಆಗಿದ್ದು ಅಂದ್ರೆ, ರಸ್ತೆ ಮೇಲೆ ಮಾರಾಟಕ್ಕೆ ಇಟ್ಟಿರೋ ಬಟ್ಟೆಗಳೆಲ್ಲ ದೊಡ್ಡ ದೊಡ್ಡ brands ದು. ಎಲ್ಲಾನು 150-200 ರುಪಾಯಿಗೆ ಮಾರಾಟ ಮಾಡ್ತಾ ಇದಾರೆ. ಅಷ್ಟು ಕಡಿಮೆಗೆ ಹೇಗೆ ಕೊಡ್ತಾ ಇದಾರೆ? ಒಂದ್ ಸಲ ಅಂದುಕೊಂಡೆ ಯಾರೋ ಹಾಕಿ ಬಿಟ್ಟಿರೋ ಬಟ್ಟೆಗಳು ಅಂತ. ಆದರೆ ಒಂದೇ ತರದ್ದು ಕನಿಷ್ಠ ಅಂದ್ರೆ ನಾಲ್ಕು ಪ್ರತಿ ಒಂದು ರಸ್ತೆ ಬದಿ ಅಂಗಡಿಲೂ ಇದೆ! factory seconds ಅಂದುಕೊಳ್ಳೋ ಹಾಗಿತ್ತು ಬಟ್ಟೆಗಳು. ಹೆಚ್ಚಾಗಿ XL, XS size ದೇ ಇದ್ದಿದ್ದು. size ಸಿಕ್ತು ಅಂದ್ರೆ design ಚೆನಾಗಿಲ್ಲ, design ಚೆನಾಗಿದೆ ಅಂದ್ರೆ cutting ಚೆನಾಗಿಲ್ಲ. ಹೀಗೆ ಏನಾರು ಒಂದು ಕೊರತೆ ಇದೆ. ಸರಿಯಾಗಿ ನೋಡಿದರೆ ಎಲ್ಲಾ ಚೆನಾಗಿರೋದು ಇದೆ. ಹುಡಿಗಿಯರಿಗಂತೂ ಸಮಯ ಹೋಗೋದೇ ಗೊತ್ತಾಗಲ್ಲ ಇಲ್ಲಿ ;)
ಮಾರು ದಿನ ಬೆಳಿಗ್ಗೆ 5 ಘಂಟೆಗೆ ಎದ್ದು, ಸೂರ್ಯೋದಯ ನೋಡೋದಕ್ಕೆ ಸಮುದ್ರ ತೀರಕ್ಕೆ ಹೋದ್ವಿ!ಬೀಚ್ ಪಕ್ಕನೆ, along the beach ರಸ್ತೆ ಇದೆ. beach ಲಿ ಇಳಿಯೋದಕ್ಕೆ ಆಗಲ್ಲ. ಕಲ್ಲು ಹಾಕಿದಾರೆ. ಕೂತು ನೋಡಬಹುದು. ಮೀನುಗಾರರ ದೋಣಿಗಳು ಕಾಣತ್ತೆ ಅಲ್ಲಲ್ಲಿ. ಎಷ್ಟು ಹೊತ್ತು ಬೇಕಾದ್ರೂ ಸಮುದ್ರ ನೋಡ್ತಾ ಕೂರಬಹುದು. ಸುಮಾರು ಜನ ರಸ್ತೆ ಮೇಲೆ ವ್ಯಾಯಾಮ,ಯೋಗ, ಅದೇನೋ french ಯೋಗ, ಎಲ್ಲಾ ಮಾಡ್ತಾ ಇರ್ತಾರೆ. ಎಲ್ಲಾ ತರಹದ ಜನ ಸಿಕ್ಕರುನೂ ಸೂರ್ಯ ಮಾತ್ರ ಸಿಗಲೇ ಇಲ್ಲ. :( ಇದೇ ಮೊದಲನೇ ಸಲ ನಾನು ಬಂಗಾಳ ಕೊಲ್ಲಿ ನೋಡ್ತಾ ಇರೋದು. ಮಧ್ಯಾಹ್ನ ತನಕ ಮಲಗೋ ಜನ ಬೆಳಿಗ್ಗೆ ಬೆಳಿಗ್ಗೆ 5 ಘಂಟೆಗೆ ಎದ್ದಿದೀನಿ ಅಂದ್ರೆ ನೀವೇ ಯೋಚನೆ ಮಾಡಿ ಎಷ್ಟು ಆಸೆ ಮಾಡ್ಕೊಂಡು ಹೋಗಿದ್ದೆ ಅಂತ. ಮೋಡ ಮೋಡ.


ಗಾಂಧಿ ತಾತ , ಫ್ರೆಂಚ್ ತಾತ ಎಲ್ಲಾ ಸಿಕ್ರು. ಮಾತಾಡಿಸಿ, ಜೊತೆಗೆ photo ತೆಗಿಸಿ, ಬೀಚ್ ಬದಿಯಲ್ಲೇ Le Cafe ಅಂತ ಒಂದು ಹೋಟೆಲು ಇದೆ. ಹೋಗಿ ಸಮುದ್ರ ನೋಡ್ತಾ ಕಾಫಿ ಕುಡಿದ್ವಿ. ತಿಂಡಿ ಇನ್ನು ಶುರು ಆಗಿರಲಿಲ್ಲ. ಬರೀ ಕಾಫಿ, ಟೀ, ಶರಬತ್ತು ಇತ್ತು ಅಷ್ಟೇ. ಅದೇನೋ ದಾಸವಾಳ ರಸ ಹಾಕಿದ ನಿಂಬೆ ಹುಳಿ ಶರಬತ್ತು ಇತ್ತು. ಕೆಂಪು ಬಣ್ಣದ ಪಾನಕ ಅಷ್ಟೇ. ಯಾವ್ ದಸವಾಳನೂ ಇಲ್ಲ. ಮೋಸ. service ಕೂಡ ಚೆನಾಗಿಲ್ಲ. ವಾಪಾಸ್ ಬಂದು, 10 ರುಪಾಯಿ ಇಡ್ಲಿ ತಿಂದ್ವಿ India coffee house ಲಿ.

ಸುಮಾರು 9 ಘಂಟೆಗೆ ಆವತ್ತಿನ ತಿರುಗಾಟ ಶುರು. ಸೈಕಲ್ ಮೇಲೆ! ಹೌದು, ಬಾಡಿಗೆಗೆ ಸೈಕಲ್ ಸಿಗತ್ತೆ. ಇಡೀ ದಿನಕ್ಕೆ ಕೇವಲ 40 ರುಪಾಯಿ. lady bird ಹತ್ತಿ ಯಾವ ಕಾಲ ಆಗಿತ್ತು! ಒಬ್ಬಬ್ಬರ ಉತ್ಸಾಹ ನೋಡಬೇಕಿತ್ತು! ಶಾಲೆಗೆ ಹೋಗೋವಾಗ ಹೊಡಿತಾ ಇದ್ದಿದ್ದು ಸೈಕಲ್! ಸಿಕ್ಕಿದ ಕೂಡ್ಲೇ ಬ್ಯಾಗ್ನ ಬುಟ್ಟಿಲಿ ಹಾಕಿ, ready steady go! ನಂಗಂತೂ ನನ್ನ school friend ಬೇರೆ ಜೊತೆಗೆ. ಕೇಳಬೇಕ? school ಕತೆ ಎಲ್ಲಾ ನೆನಪು ಮಾಡ್ಕೊಂಡು, ಓಡಿಸಿಕೊಂಡು ಹೋದ್ವಿ.

ಪಾಂಡಿಚೆರಿ ಊರನ್ನ ಎರಡು ಭಾಗ ಮಾಡಿದಾರೆ. ಒಂದು french quarter, ಇನ್ನೊಂದು tamil quarter. Tamil quarter ಗಿಜಿ ಬಿಜಿ ಇದೆ. french quarter ಮೊದಲನೇ ರಸ್ತೆನೇ ಶಾಂತವಾಗಿದೆ.ಇಲ್ಲಿ ರಸ್ತೆ ಎಲ್ಲಾ concrete ಅಥವಾ footpath tiles. ರಸ್ತೆ ಆಚೆ ಈಚೆ high ceiling buildings. ದೂರ ದೂರಕ್ಕೆ ದೊಡ್ಡ ದೊಡ್ಡ ಕಿಟಕಿ. ಬಣ್ಣ, ಒಂದೇ ಸಿಮೆಂಟು ಅಥವಾ ಬಿಳಿ. ಎಷ್ಟು ಪ್ರಶಾಂತವಾಗಿದೆ. ಗಲಾಟೆ ಅಂತು ಇಲ್ವೆ ಇಲ್ಲ. ಮರ ಗಿಡ, ಹೂವು ಹಾಸಿದ ರಸ್ತೆ ಬದಿ... :) ರಸ್ತೆಗಳೆಲ್ಲಾ perpendicular ಆಗ್ ಇದೆ. scale ಹಿಡಿದುಕೊಂಡು ಹಾಕಿದ ಹಾಗೆ. ಒಂದು map ಇದ್ರೆ ಸಾಕು. ಎಲ್ಲಾ ರಸ್ತೆಗೂ board ಇದೆ. ಏನೇನು ತೊಂದರೆ ಇಲ್ಲ ಓಡಾಡೋದಕ್ಕೆ. ನಾವಂತೂ ಸೈಕಲ್ ಇಂದ ಇಳಿಲೇ ಇಲ್ಲ ಅನ್ನಬಹುದು. ಚೆನಾಗಿರೋ ಜಾಗ ಕಂಡ್ರೆ ನಿಲ್ಸಿ, photo ತೆಗದು ಪುನಃ ಸೈಕಲ್ ತುಳಿದುಕೊಂಡು ಹೋಗೋದು. ಮನೆ ಯಾವುದು, ಆಶ್ರಮ ಯಾವುದು, cafe ಯಾವುದು ಅಂತ ಗೊತ್ತೇ ಆಗಲ್ಲ! ಇದರ ಮಧ್ಯದಲ್ಲಿ ಒಂದು ಗಣಪತಿ ದೇವಸ್ಥಾನ ಇದೆ, "ಮನುಕುಲ ವಿನಾಯಕ ಕೂವಿಲ್" . ಮುನ್ನೂರು ವರ್ಷ ಹಳೆಯದು. AC ದೇವಸ್ಥಾನ. ಹೊರಗಡೆ ಗಜರಾಜ ಇದಾನೆ, ಸೊಂಡಿಲಿಂದ ಆಶೀರ್ವಾದ ಮಾಡಕ್ಕೆ :) ವಿನಾಯಕನ ದರ್ಶನ ಮುಗಿಸಿ ಹೊರಗಡೆ ಬಂದರೆ, ಹೊರಗಡೆ ಮತ್ತೆ ಬಟ್ಟೆ ಅಂಗಡಿ. ಚಂದ ಚಂದ ಬಟ್ಟೆ ಇತ್ತು! ಹು ಹು, ಸುಮಾರ್ ಹೊತ್ತು ಅದೇ ಕೆಲಸ ಮಾಡಿದ್ದು :) ಆಚೆ ಕಡೆ ಜ್ಯೋತಿಷ್ಯ ಹೇಳ್ತಾರೆ ಅಂತ ಗೊತ್ತಾಯ್ತು. ಒಂದಿಬ್ರು ಕೇಳಿಸಿಕೊಂಡು ಬಂದಿದ್ರು. ನಾನು ಹೋದೆ. ಕೈ ನೋಡೋಳ ಮುಖ ನೋಡಿ ಹೆದರಿಕೆನೇ ಆಯ್ತು! ಆದರೂ ಕೊಟ್ಟೆ ಕೈ! ಸರಿಯೋ ತಪ್ಪೋ... ಸೂಪರ್ ಆಗಿ ಇರ್ತೀನಿ ನಾನು ಅಂದ್ಲು. ಅದೆಷ್ಟು ಖುಷಿ ಆಯ್ತು ಅಂತೀರಾ! 20 ರುಪಾಯಿ ಕೊಟ್ಟಿದ್ದು ಸಾರ್ಥಕ! :) ಇನ್ನು ಇಳಿದಿಲ್ಲ ನಶೆ ;)

ಆಮೇಲೆ ವಸ್ತು ಸಂಗ್ರಹಾಲಯಕ್ಕೆ ಹೋದ್ವಿ. ರಾಮ ರಾಮ! ಅದ್ಯಾಕೆ ಅಷ್ಟು ಜಾಗ ದಂಡ ಮಾಡಿದಾರೋ ದೇವರಿಗೇ ಗೊತ್ತು! ಕಲ್ಲು, ಮಣ್ಣು, ಒಡೆದ ಮಡಿಕೆ, ಬರೀ ಇಂತದ್ದೆ. ಏನೇನು ಚೆನಾಗಿಲ್ಲ. ಎರಡೇ ನಿಮಿಷ. ಅಲ್ಲಿಂದ ಪರಾರಿ! ಸೈಕಲ್ ತಗೊಂಡು ರಾಜ್ಯಪಾಲರ ಮನೆ ಮುಂದೆ ಅದೆಷ್ಟು ರೌಂಡ್ ಹಾಕಿದಿವೋ! ಅಲ್ಲಿ ನಿಂತಿದ್ದ 2 ಗಾರ್ಡ್ ಗಳು ಎಷ್ಟು ನಗಾಡ್ತಾ ಇದ್ರು! ಆಮೇಲೆ ರಸ್ತೆ ಉದ್ದಕ್ಕೂ ಬಟ್ಟೆ ನೋಡ್ತಾ , ಎಳನೀರು, maaza ಕುಡಿತಾ, ಬೆವರು ವರೆಸುತ್ತಾ, ಅಲ್ಲಿ ಇಲ್ಲಿ ನಿಂತು ಕ್ಯಾಮೆರಾಗೆ ಪೋಸ್ ಕೊಡುತ್ತಾ , ಊರಿಡೀ survey ಮಾಡಿದಿವಿ. ಊಟಕ್ಕೆ Le Club! ಹೆಸರು ಕೇಳಿ ನಾವು wooow! ಅಂದಿದ್ವಿ. ಗುಡಿಸಲು ಗುಡಿಸಲು . ಒಂದ್ ಗುಡಿಸಲು ಒಳಗೆ ಹೋಗಿ ಕೂತ್ವಿ. ಶೆಖೆ ಪಾಪ . ಮೆನು ನೋಡಿ ತಲೆ ತಿರುಗಿ ಹೋಯ್ತು! ಮೂರೇ ಮೂರು ಐಟಂ ಆರ್ಡರ್ ಮಾಡಿದ್ದು. ಅದ್ನ ಮಾಡಿ ತರೋ ಅಷ್ಟರಲ್ಲಿ ನಂಗೆ ನಿದ್ದೆನೇ ಬಂದುಹೊಗಿತ್ತು. service ಚೆನಾಗೇ ಇಲ್ಲ. ಸಿಗರೇಟು ವಾಸನೆ. 660 ರುಪಾಯಿಗೆ ಒಂದ್ ಒಂದ್ ತುತ್ತು ಅಷ್ಟೇ ಬಂದಿದ್ದು. ಹೋಗಲೇ ಬೇಡಿ ಇಲ್ಲಿಗೆ ಮಾತ್ರ. ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. next stop Juice wagon. ಸಣ್ಣ ಜಾಗ. neat ಆಗಿದೆ. ನಗುನಗುತ್ತಾ serve ಮಾಡ್ತಾರೆ. Pine pizza ಎಷ್ಟು ಸೂಪರ್ ಆಗಿ ಇತ್ತು ಅಂದ್ರೆ, ಒಂದ್ ಆದಮೇಲೆ ಇನ್ನೊಂದು ತಗೊಂಡು ತಿಂದ್ವಿ! Mocktails ಕೂಡ ಅಷ್ಟೇ.excellent! ಅಲ್ಲಿಂದ ಎರಡು ಅಂಗಡಿ ಆಚೆ Choco La! chocolate chocolate chocolate! expensive ಜಾಗ. ಆದ್ರೆ best chocolate!!ಎಷ್ಟು ತಿಂದ್ರೂ ಸಾಕೇ ಆಗಲ್ಲ! ಅಲ್ಲಿನ hot chocolate ಕುಡಿಬೇಕು ಒಂದ್ ಸಲ ಜೀವನದಲ್ಲಿ! ನಿಜ!ನಂಬಿ! ಅಷ್ಟು ಚೆನಾಗಿದೆ!

ಅಲ್ಲಿಂದ ಪುನಃ cycle ಹತ್ತಿ, ಅಲೆದಾಟ continue. Offbeat ಅಂತ ಒಂದು tshirt ಕಂಪನಿ ಇದೆ . trip ನೆನಪಿಗಾಗಿ "Someone who loves me went to PONDY and brought me this tshirt" ಅಂತ ಬರೆದಿರೋ tshirt ಬೇಕಿತ್ತು. ಏನಾರು ತಂದಿಲ್ಲ ಅಂದ್ರೆ ತಮ್ಮ ಬಿಡಬೇಕಲ್ಲ :P showroom ಹುಡುಕುತ್ತ ಹೋದ್ವಿ.owner ಮನೆಯೇ ಸಿಕ್ತು .ಎಷ್ಟ್ ದೊಡ್ಡ french ಮನೆ. ಒಳಗಡೆ ಹೋಗೋ ಅವಕಾಶ ಸಿಕ್ಲಿಲ್ಲ :( ಕೆಲಸದವನ ಜೊತೆಗೆ ಆಚೆ ಬೀದೀಲಿ ಇರೋ godown ಗೆ ಹೋಗಿ, tshirt ತಗೊಂಡು ದುಡ್ಡು ಕೊಡಕ್ಕೆ ಹೋದ್ರೆ, madam ಗೆ ಕೊಡಿ ಅಂದ. ಮನೆ ನೋಡಕ್ಕೆ ಒಂದ್ ಅವಕಾಶ ಅಂತ :) ಮಾಡ್ಕೊಂಡು ಹೋದ್ವಿ. ದೊಡ್ಡ compound. ಗೇಟ್ ತೆಗದು ಹೋದ್ರೆ, ನೆಲದ ಮೇಲೆ pebbles, ಬದಿಯಲ್ಲಿ ಕಲ್ಲಿನ ಬೆಂಚು. ನಾಕು ಮೆಟ್ಟಿಲು ಹತ್ತಿದರೆ ಹಾಲ್. ಮನೆ ನೋಡ್ಬೇಕು ಅಂತ ತುಂಬಾ ಆಸೆ ಆಯ್ತು. ನೀರ್ ಕೊಡ್ತೀರ? ಅಂತ ಕೇಳ್ದೆ. ಮನೆ ಒಳಗಡೆ ತನಕ ಕರೆದುಕೊಂಡು ಹೋದರು. work ಆಯ್ತು planu! ;) ಎಷ್ಟ್ ಚಂದ ಮನೆ!!! high ceiling, ಅಡ್ಡ ಮನೆ. ಮಧ್ಯ ಹಾಲ್, ದಾಟಿದರೆ ಇನ್ನೊಂದು ಹಾಲ್, ಕಿಟಕಿ ಇಲ್ಲ, ಕಂಬ ಕಂಬ. ಬಿದಿರಿನ ಚಾಪೆ ಬಿಸಿಲು ಬಂದ್ರೆ ಮುಚ್ಚೋಕೆ. ಮತ್ತೆ ಎರಡು ಮೆಟ್ಟಿಲು ಇಳಿದರೆ ತುಳಸಿ ಕಟ್ಟೆ, ಪುಟಾಣಿ garden. ಮನೆ ಯಜಮಾನ ಜೋಕಾಲಿ ಲಿ ಕೂತಿದ್ರು. ಚೆನಾಗಿ ಮಾತಾಡ್ಸಿದ್ರು :) ನಾನಂತೂ ಮನೆ ನೋದೊದರಲ್ಲೇ ಇದ್ದೆ. ನೀರು ಕೇಳಿದ್ದು ಮರತೆ ಹೋಗಿತ್ತು ;) ಹೊರಗೆ ಬರೋವಾಗ ಸಣ್ಣಕೆ ಮಳೆ! ಆಹಾ ಬೆಂಗಳೂರಿನ ಜಂಜಾಟದಿಂದ ದೂರ, ಯಾವ್ದೋ ಪ್ರಶಾಂತವಾದ ಜಾಗದಲ್ಲಿ, ಸೈಕಲ್ ಹೊಡಿತಾ ವಾಪಾಸ್ ಬಂದ್ವಿ ನಾವಿಬ್ರು. ಬಂದು ಎಲ್ಲರಿಗು ಮನೆ ನೋಡಿದ ಕತೆ ಹೇಳಿದ್ವಿ :) J ಆಯ್ತು ಅನ್ಸತ್ತೆ ;)

ರಾತ್ರಿ ಇನ್ನೊಂದು ರೌಂಡು shopping! richie rich ice cream parlour ಲಿ pizza, ice creamu ತಿಂತಾ ಇರೋವಾಗ, ಪುದುಚೆರಿ ಅಂತ ಬರೆದಿರೋ mug ಬೇಕು ಅನಿಸೋದಕ್ಕೆ ಶುರು ಆಯ್ತು! ಸಿಗೋದು promenade ಬೀಚ್ ಹತ್ರ. ಮೂಲೇಲಿ! ಆದ್ರೆ ಬೇಕೇ ಬೇಕು! ಇನ್ನೇನ್ ಮಾಡೋದು, ಹೋದ್ವಿ. ಬೆಳಿಗ್ಗೆ ಇಂದ ಎಷ್ಟ್ ಪ್ರಶಾಂತಾವಾಗಿದ್ದ ಬೀಚ್, ಸಂತೆ ಆಗಿಹೋಗಿತ್ತು. ಕಿಚಿ ಕಿಚಿ. ಚೀ . ಓಡಿ ಓಡಿ ಹೋಗಿ, mug ತಗೊಂಡು ಬಂದು, ಪ್ಯಾಕ್ ಮಾಡಿ, ಬೆಂಗಳೂರಿಗೆ!