ಬೆಂಗಳೂರು garden city ಆಗಿದ್ರೂ ಅಲ್ಲಿ ಇಷ್ಟೆಲ್ಲಾ ಪಾರ್ಕಿಗೆ ಹೋಗ್ತಾ ಇರ್ಲಿಲ್ಲ. ಇಲ್ಲಿ ಪುರುಸೊತ್ತು ಜಾಸ್ತಿ ಆಗಿದಿಯೋ ಅಥವಾ ನಿಜಾವಾಗಿಯೂ ತುಂಬಾ ಪಾರ್ಕ್ ಗಳು ಇವೆಯೋ ಏನೋ ಈಗಂತೂ ಪಾರ್ಕಿಗೆ ಹೋಗೋದಕ್ಕೆ ದಿನ ನೆಪ ಹುಡುಕ್ತಾ ಇರ್ತಿನಿ.
ಗೂಗಲ್ ಮಾಪ್ ಲಿ ಹಸಿರು ಬಣ್ಣ ಕಾಣೋ ಜಾಗ ಹತ್ರ ಎಲ್ಲೆಲ್ಲಿ ಇದೆ ಅಂತ ನೋಡೋದು, ಒಂದ್ ಒಂದು ಸರ್ತಿ ಒಂದೊಂದು ಕಡೆ ಹೋಗೋದು. ಸುಮ್ನೆ ಕೂತು ಹರಟೆ ಹೊಡಿಯೋದು, ಸ್ವಲ್ಪ ಹೊತ್ತು ನಡಿದಾಡೋದು, Of course ಒಂದಿಷ್ಟ್ ಫೋಟೋ ತೆಗಿಯೋದು, ಗಾಳಿ ಕುಡಿದು fresh ಆಗಿ ಮನೆಸೇರೋದು. ಇದು ಸೂರ್ಯ ಹೊರಗೆ ಕಾಣೊದಕ್ಕೆ ಶುರುಆದಾಗಿಂದ ಹತ್ತಿರೋ ಚಟ.
ಅಲ್ಕಿ ಬೀಚ್ : ಸಾಗರದ ನೀರಲ್ಲ, ಆದರೂ ಸಣ್ಣ ಪುಟ್ಟ ಅಲೆಗಳು ಇವೆ , ಮರಳು ಇದೆ ಹಾಗಾಗಿ ಬೀಚ್ .
ನೀರಲ್ಲಿ ಆಡೋದಕ್ಕೆ ಅಲ್ಲ , ಕತ್ತಲಲ್ಲಿ ಇದನ್ನ ನೋಡೋದಕ್ಕೆ ಹೊಗೊದು :)
0 comments:
Post a Comment