What we ate in Bali

ಬಾಲಿಗೆ ಯಾವುದೇ ದೇಶದವರು ಬಂದರೂ ಊಟಕ್ಕೆ ತೊಂದರೆ ಆಗಲಿಕ್ಕಿಲ್ಲ. ತುಂಬಾ  variety ಇದೆ ಹಾಗೆ options ಕೂಡ ಇದೆ. 

ನೋಡಿ ನಾವೆನೇನ್ ತಿಂದ್ವಿ ಅಂತ.

 Breakfast :
Resort ಲಿ complementary breakfast ಇತ್ತು. ಒಂದು call ಮಾಡಿ ಹೇಳಿದ್ರೆ ಆಯ್ತು ಏನು ಬೇಕು ಅಂತ (Menu ಲಿ ಇರೋದನ್ನೇ ಕೇಳಬೇಕು. ಇಡ್ಲಿ ದೋಸೆ ಎಲ್ಲಾ ಸಿಗೋದಿಲ್ಲ :P ) ಹೇಳಿದ ಸಮಯಕ್ಕೆ ಸರಿಯಾಗಿ ಹಾಜರ್!
Juice, Muesli, fruits, Sandwich, Coffee/tea , Breads ಎಲ್ಲಾ ಸಿಗೋದು. Balcony ಲಿ ಕೂತು ತಿಂಡಿ ತಿನ್ನೋದು ದಿನದ highlight. Nasi Goreng  (ನಾಸಿ ಗೊರೆಂಗ್):
World`s most delicious foods - 2011 list ಲಿ ಇದು ಎರಡನೇಯದಂತೆ. ನಮ್ಮ ದೇಶದ Fried rice ಇಲ್ಲಿ Nasi Goreng. ನಾಸಿ ಅಂದ್ರೆ ಅನ್ನ ಅಂತ ಅರ್ಥ.Thai Ginger, Lemon grass ಹಾಕಿರೋ Fried rice ಇದು. Indonesia ದ National Dish. ನಂಗಂತೂ ಇಷ್ಟ ಆಯ್ತು. ಎಲ್ಲಾ restaurants ಲ್ಲೂ    ಸಿಗ್ತಾ ಇತ್ತು. ಆದ್ರೆ ಒಂದ್ ಒಂದ್ ಕಡೇನೂ ಒಂದ್ ಒಂದ್ ಥರ. ಹಾಗಾಗಿ bore ಆಗ್ಲಿಲ್ಲ. Rice ಜೊತೆ bread piece, fries, fried Tofu, cucumber slices ಈ ಥರ ಏನಾರು ಒಂದು accompaniment ಕೊಡ್ತಾರೆ. 
             

Nasi Campur
ಅಲ್ಲಿ ಜನ ಪ್ರತಿದಿನ ಮನೇಲಿ ಊಟಕ್ಕೆ ಇದನ್ನೇ ಮಾಡೋದಂತೆ. ಹೆಸರು Nasi Campur. ಇವರ style ಲಿ ಮಾಡಿದ ಅನ್ನ, ಹಪ್ಪಳ, ಪಲ್ಯ, ಕೋಸಂಬರಿ, ಚಟ್ನಿ ಪುಡಿಯ Platter.ಕೆಲೋ ಕಡೆ  Accompaniment ಆಗಿ ಕರಿದ Tofu ಕೊಡ್ತಾರೆ. ಹೀಗೇ ಇರಬೇಕು ಅಂತ rules ಇಲ್ಲ. Nasi Goreng ಥರ ಇದನ್ನೂ  ಒಬ್ರೊಬ್ರು ಒಂದ್ ಒಂದ್ ಥರ ಮಾಡ್ತಾರೆ.


Naan , Paneer Butter Masala and Biryani
ಎರಡೇ ದಿನದಲ್ಲಿ ನಮ್ಮ ದೇಶದ ಊಟ ಬೇಕು ಅನ್ನಿಸೋದಕ್ಕೆ ಶುರು ಆಯ್ತು. ನಾವು ಇದ್ದ ಊರಿನಲ್ಲಿ ಒಂದು Indian Restaurant ಇತ್ತು. ಜೈ! ತುಂಬಾ excitement ನಮಗೆ ನಾವು ಭಾರತದಿಂದ ಬಂದಿದಿವಿ ಅಂತ ಮಾತಾಡಿಸಿಕೊಂಡು ಬರಣ ಅಂತ ಅಂದುಕೊಂಡಿದ್ವಿ. ಆದ್ರೆ owner ಮಾತ್ರ ಭಾರತೀಯ. ಅಲ್ಲಿ ಕೆಲಸಗಾರರೆಲ್ಲಾ ಬಾಲಿ ಜನರು. ಬಾಣಸಿಗ ಕೂಡ. 
ನಾನ್, ಪನೀರ್ ಬಟರ್ ಮಸಾಲ, ಬಿರಿಯಾನಿ ನೋಡಿಯೇ ಸಂತೋಷವಾಗಿತ್ತು. ಇಲ್ಲಿನವರು ಮಾಡಿದ ಹಾಗೆ ಮಾಡಿದ್ದ. ಬಾಲಿ ಜನ ಮಾಡಿದ್ದು ಅಂತ ಅನ್ನಿಸಲಿಲ್ಲ. ಎರಡು ಮೂರು ದಿನ ರಾತ್ರಿ ಊಟಕ್ಕೆ ಅಲ್ಲಿಗೆ ಹೋಗಿದ್ವಿ. ನಮ್ ದೇಶದ ಜನ ಕೂಡ ಸಿಕ್ಕಿ, ಮಾತಾಡ್ಸಿದ್ರು. ದೂರದ ದೇಶಕ್ಕೆ ಹೋದಾಗ ನಮ್ಮವರನ್ನ ಕಂಡ್ರೆ ಎಷ್ಟ್ ಖುಷಿ ಆಗತ್ತೆ ಅಲ್ವ? ಇಲ್ಲೇ ಇರೋವಾಗ ಪರಿಚಯ ಇಲ್ಲದೆ ಇರೋ ಇಬ್ಬರು ಮುಖ ಮುಖ ನೋಡಿದ್ರೆ poker face ಮಾಡ್ತೀವಿ. ಬೇರೆ ದೇಶ ಆದ್ರೆ ಹತ್ರ ಹೋಗಿ ಸಂಭಾಷಣೆ ಲಿ ತೊಡಗ್ತೀವಿ. ದೂರ ಇರೋವಾಗಲೇ ಅದರ importance ಗೊತ್ತಾಗೋದು.

Anyways ಬಾಲಿಲಿ ನಾಲ್ಕು- ಐದು ಕಡೆ Indian restaurants ಇದೆ. ಎಲ್ಲಾ ಒಬ್ಬನದ್ದೆ. ಒಂದೇ menu. ನಾವು "ಉಬುದ್" ಮತ್ತೆ "ಕೂಟ" ಲಿ ಇರೋ restaurants ಹೋಗಿದ್ವಿ. 


Veg Martabak
Saudi arabia, Indonesia ಲಿ non veg Martabak famous ಅಂತೆ. ಅದರದ್ದೇ veg version ಇದು. ಒಂದು ತರಹದ stuffed paratha. paratha part layer-layer ಆಗಿತ್ತು.Paratha ನ ಸಣ್ಣ ಸಣ್ಣ  squares ಆಗಿ cut ಮಾಡಿ kurma ಜೊತೆ serve ಮಾಡ್ತಾರೆ.


Fruits
Bedugul ಅಂತ ಒಂದು ಊರಿದೆ. ಹೂವು ಹಣ್ಣು ಸಿಕ್ಕಾಪಟ್ಟೆ ಬೆಳೆಯುವ ಜಾಗ. ಬಾಲಿಯ ಬೇರೆ ಊರುಗಳಿಗೆ ಹೂವು ಹಣ್ಣು ಇಲ್ಲಿಂದಲೇ supply ಆಗೋದು. ಅಲ್ಲಿನ Fruit market ಗೆ ಹೋಗಿ , ಕೆಲವು variety ಹಣ್ಣುಗಳನ್ನ ತಿಂದು ಬಂದ್ವಿ. 
Pizza
Pizza bagus ಇಂದ pizza. Resort ಗೆ deliver ಕೂಡ ಮಾಡ್ತಾರೆ.

Starbucks
Denapasar Airport ಲಿ ಕೂತ್ಕೊಳೋದಕ್ಕೆ ಜಾಗ ಬೇಕಿತ್ತು. Wi-fi ಬೇಕಿತ್ತು. ಕಣ್ಣೆದ್ರಿಗೆ Starbucks ಇತ್ತು. ಬಾಲಿಗೆ ಬರೋವಾಗ ನೋಡಿದ್ದೆ. Plus Starbucks ಬಗ್ಗೆ ತುಂಬಾ ಕೇಳಿದ್ದೆ. ಇದೇ ಅವಕಾಶ ಅಂತ ಹೋದ್ವಿ. ನೋಡಿ ಎಷ್ಟ್ ತಿಂದಿದಿವಿ ಅಂತ :)

PS: Vegetarians "No meat No egg"  ಎಲ್ಲಾ ಕಡೇನೂ, ಪ್ರತಿಯೊಂದು ಆರ್ಡರ್ ಗೂ ಹೇಳಬೇಕು. 

1 comments:

ಬಾಯಲ್ಲಿ ನೀರ್ಬಂತು.

 

Post a Comment