ಜಾಗ ಮಹಾ ಏನು ದೊಡ್ದದಾಗಿಲ್ಲ. 8 table ಇರಬಹುದು ಅಷ್ಟೇ. weekday ಟೇಬಲ್ ಸಿಗೋದು ಕಷ್ಟ ಇಲ್ಲ ( ನಮ್ಮನ್ನ ಬಿಟ್ರೆ ಇನ್ನೊಬ್ಬ ಇದ್ದ ಅಷ್ಟೇ) ಅರೇಬಿಯನ್ food festival ಅಂತೆ ಈ ತಿಂಗಳು. ಅವರ regular menu ಜೊತೆ ಅರೇಬಿಯ ತಿಂಡಿಗಳು ಸಿಗತ್ತೆ. ಸೊಪ್ಪು ತರಕಾರಿದು ಹೆಚ್ಚಿಗೆ ಕಾಣಲಿಲ್ಲ ಹಾಗಾಗಿ ಅರೇಬಿಯ ಕಡೆ ತಲೆ ಹಾಕಲಿಲ್ಲ.
Main menu ಲಿ ಸುಮಾರು ದೇಶದ ರೂಲ್ಸ್ ಇದೆ. ಹೆಸರಿನ ಪಕ್ಕದಲ್ಲಿ ದೇಶದ ಬಾವುಟ ಇದೆ.ಶಾಲೇಲಿ ಕಲೆತದ್ದು ನೆನಪಿದ್ರೆ ಸಹಾಯಕ್ಕೆ ಬರತ್ತೆ. ಇಲ್ಲ ಅಂದ್ರೆ waiter ನ ಕೇಳಬಹುದು. ಸರ್ವಿಸ್ ಪರವಾಗಿಲ್ಲ ಫಾಸ್ಟ್ ಇದೆ.
ನಾವು ತಿಂದದ್ದು:
Starter:
Shaka Momo: ಎಲೆ ಕೋಸು ಪಲ್ಯ ತುಂಬಿದ, ಹಬೆಯಲ್ಲಿ ಬೇಯಿಸಿದ ಮೋದಕ ;) ರುಚಿ ಇತ್ತು!! ಹಚ್ಚಿ ತಿನ್ನೋದಕ್ಕೆ ಚಟ್ನಿ (ಈರುಳ್ಳಿ ಚಟ್ನಿ ಥರ ). ಖಾರ ಕಡಿಮೆ. Momo ಗೆ ಎಣ್ಣೆ ಜಾಸ್ತಿ (ಎಣ್ಣೆ ಯಾಕೆ ಹಾಕಿದರು ಅಂತ ಗೊತ್ತಿಲ್ಲ)
Samarkhand Shashlik:
ಪನೀರ್, ದೊಡ್ಡ ಮೆಣಸಿನ ಕಾಯಿ,ಟೊಮೇಟೊ ಇದನ್ನ cut ಮಾಡಿ, ಕಡ್ಡಿಗೆ ಚುಚ್ಚಿ, ಕೆಂಡದಲ್ಲಿ ಸ್ವಲ್ಪ ಸುಟ್ಟು ಮೇಲಿಂದ ಯಾವ್ದೋ ಚಟ್ನಿ ಹಾಕಿ ಕೊಟ್ಟಿದ್ರು.
ಫೋಟೋದಲ್ಲಿ ಒಂದೇ ಕಡ್ಡಿ ಇದೆ. ಆದರೆ 3 ಕಡ್ಡಿ ಕೊಟ್ಟಿದ್ರು. 2 ಕಡ್ಡಿ ಖಾಲಿ ಮಾಡಿದ ಮೇಲೆ ಫೋಟೋ ತೆಗಿಯೋ
ದಕ್ಕೆ ನೆನಪಾಗಿದ್ದು :)
Main course :
Fajita Vegitarianos :
Mexico ದೇಶದ್ದು ಇದು. ಮೈದಾ ಹಿಟ್ಟಿನ ಚಪಾತಿ ಒಳಗೆ ಎಲ್ಲಾ ಒಳ್ಳೊಳ್ಳೆ ತರಕಾರಿಗಳ super spicy ಪಲ್ಯ ಹಾಕಿದ roll, fried rice ನ ಜೊತೆ.
ಇದಕ್ಕೆ ಒಂದ್ ಬಗೆಯ ಗೊಜ್ಜು,ಮೊಸರು ಥರದ್ದು ಏನೋ ಒಂದುಕೊಟ್ಟಿದ್ರು. roll ಮತ್ತು ಗೊಜ್ಜು ತುಂಬಾನೇಚೆ
ನಾಗಿತ್ತು! Roll ಒಳಗಡೆ ಹಾಕಿದ್ದ ಪಲ್ಯ ನ ಅನ್ನಕ್ಕೆ ಹಾಕಿ ಕಲಸಿದ ಹಾಗಿತ್ತು friedರೈಸ್ ;)
ರೋಲ್ ಸಕತ್ ಆಗಿತ್ತು. ಆಸೆ ಆಗ್ತಾ ಇದೆ!
Dessert:
Bird`s Nest
Flat noodles
ನ ಎಣ್ಣೇಲಿ ಕರಿದು, ಜೀನಲ್ಲಿ
ಅದ್ದಿ
ತೆಗದು, ಅದರ ಮೇಲಿಂದ ಒಂದೇ ಒಂದು scoop ice cream
, ಅದರ ಮೇಲೆ ಸ್ವಲ್ಪ chocolate sauce
. ತುಂಬಾ ಸಿಹಿ ಇತ್ತು. Ice cream
ಇನ್ನೊಂದು ಸ್ಕೂಪ್ ಆದ್ರೂ ಬೇಕಿತ್ತು.
ಒಟ್ಟಾರೆ ಬೇರೆ ಥರದ ಊಟ. ಇಷ್ಟ ಆಯ್ತು. ಹೋಗಬಹುದು.
Qucik Look:
Location :
No. 15, 1st Main Road, 1st Block, Koramangala, Bangalore
Price : Average meal for 2 costs Rs.350
Ambiance: Not very great.