Queen`s

ಕಥೆ ಕೇಳೋದಕ್ಕೆ ಪುರುಸೊತ್ತಿಲ್ಲ ಅಂದ್ರೆ, end ಲಿ Summary ಇದೆ ಸಣ್ಣದಾಗಿ :)

ಸುಮಾರ್ ದಿನ ಆದಮೇಲೆ ಸಿಕ್ಕಿದ್ದು ನಾವು 6 ಜನ. ಹೇಳೋಕೆ ಮಾತ್ರ ಒಂದೇ ಊರಲ್ಲಿ ಇದ್ದಿವಿ, for all practical purposes ಬೇರೆ ಬೇರೆ ಊರೇ. ಹೆಚ್ಚು ಕಡಿಮೆ ನೂರು messages exchange ಆದ್ಮೇಲೆ ಗರುಡ ಲಿ ಸಿಗೋದು ಅಂತ ಆಯ್ತು. ಗರುಡ ಮುಗಿಸಿ, ಮಾತು ಕತೆ ಮುಂದುವರಿಸುತ್ತಾ, brigade, MG Road ಎಲ್ಲಾ survey ಮಾಡಿ, ಕಾಲು ಸೋತು, ಹಸಿವೆ ಆದಾಗ church street ಗೆ ನುಗ್ಗಿದ್ವಿ. Queen`s ಗೆ ಹೋಗೋದು ಅಂತ ಆಗಿತ್ತು. ಎಷ್ಟೋ ಸರ್ತಿ ಅ ರೋಡ್ ಲಿ ಓಡಾಡಿದೀವಿ spot ಮಾಡೋದಕ್ಕೆ ಆಗಿರಲಿಲ್ಲ. ಈ ಸಲ ಹೋಗಲೇ ಬೇಕು ಅಂತ ನಿಶ್ಚಯ ಮಾಡಿದ್ವಿ. just dial ಗೆ call ಮಾಡಿ, Queen`s ಗೆ call ಮಾಡಿ, ದಾರಿ ಕೇಳಿ ನೋಡಿದ್ರೆ, ನೋಡಿದ್ದೇ ಜಾಗ! ಆದ್ರೆ ಅದೇ ಅಂತ ಗೊತ್ತಿರ್ಲಿಲ್ಲ. ಹೊರಗಿಂದ ನೋಡಿದ್ರೆ ಯಾವ್ದೋ bar ಅನ್ಕೋಬೇಕು. ಇಣಿಕಿ ನೋಡಿದ್ರೆ ಜನ ಸುಮಾರ್ ಇದಾರೆ! ಚೆನಾಗೇ ಇದೆ! ಒಳಗೂ ಅಷ್ಟೇ ಕತ್ತಲು ಕತ್ತಲು. ಗುಹೆ ಥರ ಇದೆ. ಮಣ್ಣಿನ ಗೋಡೆ, ತಾಮ್ರದ ಪಾತ್ರೆ, table ಮೇಲೆ ಚಾಪೆ, ಚೆನಾಗಿ ಅನಿಸಿತು :) ಆದ್ರೆ ಇಕ್ಕಟ್ಟು. chair ಆಚೆ ಈಚೆ ಅಲ್ಲಾಡಿಸೋದಕ್ಕೆ ಆಗಲ್ಲ. 10 table ಇರಬಹುದು ಅಷ್ಟೇ. ಊಟ normal. ಮನೆ ಲಿ ಮಾಡಿದ ಹಾಗೇ ಇದೆ. ನಾವು ಅಲ್ಲಿ, ಇಲ್ಲಿ, ಗಲ್ಲಿಲಿ ತಿಂದು ಬಂದಿದ್ದರಿಂದ ಹೆಚ್ಚಿಗೆ ಏನು ತಿನ್ಲಿಲ್ಲ. 3 phulka, ಪಲ್ಯ (Baingan ka barta and dal) ಅಷ್ಟೇ ("ಸುಬ್ಬಮ್ಮನ ಉಪವಾಸ"ಅಂತ ಆಡ್ಕೋಬೇಡಿ). Rs.75 ಆಯ್ತು ಒಬ್ಬರಿಗೆ. Quantity ಏನು ಹೇಳಿಕೊಳ್ಳೋ ಹಾಗಿಲ್ಲ. ಎಷ್ಟ್ ಅಂದ್ರು Church Street ಅದು, ಅಷ್ಟೂ charge ಮಾಡದೇ ಇದ್ರೆ ಆಗತ್ತಾ?


Quick Look

Location : Church Street (behind Sringar Complex)
Price : Average meal for 2 Rs.200
Ambiance: Cave like, Dully lit
Food : Homely North Indian food with South Indian touch served in copper plates n bowls
  • Congested dining area

6 comments:

Yene...Short agi describe madidya aa dina na.:)Chennagide kane..matte hange sigona ayta...

 

ರೀ.. Greeshma..,
ಸುಂದರ ಅನುಭವದ ಲೇಖನ..

 

Sumne hige odata nimma blog ge bande... MOdal saari nimma blog ge nanna comment... tumbaa chenaagi baritiraa.. good one keep it up :)

 

@Sankalpa
Queen`s restaurant bagge ashte kaNe heLak hortiddu. naav maja maaDidnella bere kaDe heLana ;)

@jnaanaarpaNamasu, manasa
thank u! :)

 

ಗ್ರೀಷ್ಮಾ
ಲೇಖನ ತುಂಬಾ ಚೆನ್ನಾಗಿದೆ
ನನಗೆ ಹೋದಂತೆ ಆಯಿತು

 

ಘ್ರೀಷ್ಮಾ,

ಕ್ವೀನ್ಸ್ ಗೆ ನಾವು ಸ್ನೇಹಿತರೆಲ್ಲ ಕಾಲೇಜಿನಲ್ಲಿ ಇದ್ದಾಗ ಸುಮಾರು ಬಾರಿ ಹೋಗಿದ್ವಿ . ಅದು ೧೦ ವರ್ಷದ ಹಿ೦ದಿನ ಮಾತು.
ಈ ಲೇಖನ ನೋಡಿದ ಮೇಲೆ ಮತ್ತೆ ಅಲ್ಲಿ ಹೋಗುವ ಆಸೆ ಬ೦ದಿದೆ. ಫುಲ್ಕ ಮತ್ತು ಪಾಲಕ್ ಪನ್ನೀರ್ ನಮ್ಮ ಆರ್ಡರ್ ಆಗಿರತ್ತೆ ಮಾಮೂಲಿನ೦ತೆ!

ನಿನ್ನ ಬ್ಲಾಗ್ ಚೆನ್ನಾಗಿದೆ.

 

Post a Comment